ಕಲ್ಪ ಮೀಡಿಯಾ ಹೌಸ್ | ಗುರುಗ್ರಾಮ |
ಸ್ಲೀಪರ್ ಬಸ್ ಏಕಾಏಕಿ ಹೊತ್ತಿ ಧಗಧಗ ಉರಿದ ಪರಿಣಾಮ ಇಬ್ಬರು ಪ್ರಯಾಣಿಕರು ಸಜೀವವಾಗಿ ದಹನಗೊಂಡು, 12ಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಧಾರುಣ ಘಟನೆ ದೆಹಲಿ ಬಳಿಯಲ್ಲಿ ನಡೆದಿದೆ.
ನವದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯ ಗುರುಗ್ರಾಮದ ಮೇಲ್ಸೇತುವೆ ಬಳಿಯಲ್ಲಿ ಘಟನೆ ನಡೆದಿದೆ. ಈ ಸ್ಲೀಪರ್ ಬಸ್ ಗುರುಗ್ರಾಮ ತಲುಪುತ್ತಿದ್ದಂತೆಯೇ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತತಕ್ಷಣ ಕೆಲವು ಪ್ರಯಾಣಿಕರು ಬಾಗಿಲು ಹಾಗೂ ಕಿಟಕಿಗಳಿಂದ ಕೆಳಕ್ಕೆ ಜಿಗಿದಿದ್ದಾರೆ. ಆದರೆ, ಗಾಢ ನಿದ್ರಾವಸ್ಥೆಯಲ್ಲಿದ್ದ ಇಬ್ಬರು ಪ್ರಯಾಣಿಕರು ಮಾತ್ರ ಸಜೀವವಾಗಿ ದಹನಗೊಂಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ತತಕ್ಷಣ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ದೆಹಲಿ ಜೈಪುರ ಹೆz್ದÁರಿಯಲ್ಲಿ ಸುದೀರ್ಘ ಟ್ರಾಫಿಕ್ ಜಾಮ್ ಆಗಿತ್ತು.
Also read: ಅಕ್ರಮ ವಿದ್ಯುತ್ ಸಂಪರ್ಕದ ತಂತಿಗೆ ಬಲಿಯಾಯ್ತು ಗಂಡು ಕಾಡಾನೆ | ದೂರು ದಾಖಲು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post