ಕಲ್ಪ ಮೀಡಿಯಾ ಹೌಸ್ | ಆಗ್ರಾ |
ಹೋಂ ಸ್ಟೇನಲ್ಲಿ #Homestay ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ #GangRape ನಡೆಸಿ, ಆಕೆಗೆ ಮದ್ಯ ಕುಡಿಸಿ, ತಲೆಗೆ ಬಾಟಲಿಯಿಂದ ಹೊಡೆದ ಕ್ರೂರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿನ ತಾಜ್ಗಂಜ್’ನಲ್ಲಿ ನಡೆದಿದೆ.
ಘಟನೆ ಕುರಿತಂತೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಹೋಂ ಸ್ಟೇನಲ್ಲಿ ತನಗೆ ಬಲವಂತವಾಗಿ ಮದ್ಯ ಕುಡಿಸಿ, ಬಾಟಲಿಯಿಂದ ತಲೆಗೆ ಹೊಡೆದ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೇ, ಆಕೆಯ ಆಕ್ಷೇಪಾರ್ಹ ವೀಡಿಯೋವನ್ನು #Video ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಶನಿವಾರ ರಾತ್ರಿ ತಾಜ್ಗಂಜ್ ಪೊಲೀಸರಿಗೆ ರಿಚ್ ಹೋಂಸ್ಟೇನಲ್ಲಿ #HomeStay ಮಹಿಳೆಯೊಬ್ಬರ ಮೇಲೆ ಅತ್ಯಾಚಾರ #Rape ಎಸಗಿ, ಹಲ್ಲೆ ಮಾಡಲಾಗಿದೆ ಎಂದು ಕರೆ ಬಂದಿತು. ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಸಂಬಂಧಿತ ಸೆಕ್ಷನ್’ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
ಅತ್ಯಾಚಾರಕ್ಕೆ ಸಹಕಾರ ನೀಡಿದ ಓರ್ವ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಹೋಂಸ್ಟೇ ಮ್ಯಾನೇಜರ್ ರವಿ ರಾಥೋಡ್ ಮತ್ತು ಅವರ ಸ್ನೇಹಿತರಾದ ಮನೀಶ್ ರಾಥೋಡ್, ಜಿತೇಂದ್ರ ರಾಥೋಡ್ ಮತ್ತು ದೇವ್ ಕಿಶೋರ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ವೀಡಿಯೋ ಮಾಡಲು ಸಹಕಾರ ನೀಡಿದ ಮಹಿಳೆಯನ್ನೂ ಸಹ ಬಂಧಿದಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















