ಕಲ್ಪ ಮೀಡಿಯಾ ಹೌಸ್ | ರಾಮನಗರ |
ಭೂ ಸರ್ವೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಪರಿಣಾಮ ರೈತರೂ ಸಹ ತಮ್ಮದಲ್ಲದ ತಪ್ಪಿಗೆ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಹೀಗಾಗಿ ರೈತರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ಶತಮಾನಗಳ ನಂತರ ಭೂ ರೀ ಸರ್ವೆ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ Minister Krishna Bairegowda ಅವರು ತಿಳಿಸಿದರು.
ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿಯಲ್ಲಿ ಬುಧವಾರ ಭೂ ಮರು ಮಾಪನ (ರೀ ಸರ್ವೆ) ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಸರ್ವೇ ನಂಬರ್ ಡಿಸ್ಪ್ಯೂಟ್ ಎಂಬುದು ಇತ್ತೀಚೆಗೆ ರೈತರ ಪಾಲಿನ ಸಾಮಾನ್ಯ ಸಮಸ್ಯೆಯಾಗಿದೆ. ತಮ್ಮದಲ್ಲದ ತಪ್ಪಿಗೆ ದಿನಂಪ್ರತಿ ಸರ್ಕಾರಿ ಕಚೇರಿಯನ್ನು ಅಲೆಯುವಂತಾಗಿದೆ” ಎಂದು ವಿಷಾಧಿಸಿದರು.

#ರೀ ಸರ್ವೇ ಲಾಭವೇನು?
ಪ್ರತಿ ಹಳ್ಳಿಯ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರ್ಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳಿಗೆ ಸಂಬಂಧಿಸಿದಂತೆ ಈಗ ಸರ್ಕಾರದ ಬಳಿ ಇರುವುದು ನೂರು ವರ್ಷಗಳ ಹಳೆಯ ದಾಖಲೆ. ಆದರೆ ಈ ನೂರು ವರ್ಷದಲ್ಲಿ ಕೃಷಿ ಮತ್ತು ಜನವಸತಿ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಪ್ರತಿಯೊಂದು ಗ್ರಾಮಠಾಣಾ ಹಾಗೂ ಸರ್ವೇ ನಂ ಗಡಿಯಲ್ಲೂ ವ್ಯತ್ಯಾಸಗಳಿವೆ. ಈ ಬಗ್ಗೆ ಸರ್ಕಾರಿ ದಾಖಲೆಗಳಲ್ಲಿ ನಿಖರ ವಿವರಣೆ ಇಲ್ಲ. ಇದಲ್ಲದೆ, ಸರ್ಕಾರಿ ಭೂ ಒತ್ತುವರಿ ಜಮೀನು ಯಾವುದು? ಹಾಗೂ ಅರಣ್ಯ ಪ್ರದೇಶದ ಗಡಿಯ ಬಗ್ಗೆಯೂ ಸಾಕಷ್ಟು ಗೊಂದಲ ಇದೆ. ಈ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವ ಸಲುವಾಗಿಯೇ ಇದೀಗ ತಾಂತ್ರಿಕ ಭೂ ರೀ ಸರ್ವೇಗೆ ಚಾಲನೆ ನೀಡಲಾಗಿದೆ.

(ವರದಿ: ಡಿ.ಎಲ್. ಹರೀಶ್, ಬೆಂಗಳೂರು)











Discussion about this post