ಕಲ್ಪ ಮೀಡಿಯಾ ಹೌಸ್ | ಬಿಜ್ನೋರ್ |
ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ಗುಂಪೊಂದು ದರೋಡೆ ಮಾಡುವ ಜೊತೆಯಲ್ಲಿ ಮಾಲೀಕನ ಪತ್ನಿಯನ್ನು ಕಟ್ಟಿಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘೋರ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಖ್ಯಾತ ಉದ್ಯಮಿಯೊಬ್ಬರು ತಮ್ಮ ತಾಯಿ ಹಾಗೂ ಮಕ್ಕಳೊಂದಿಗೆ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಐವರು ದರೋಡೆಕೋರರ ಗುಂಪೊಂದು ಮನೆಯಲ್ಲಿ ಒಬ್ಬರೇ ಇದ್ದ ಉದ್ಯಮಿಯ ಪತ್ನಿಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಅತ್ಯಾಚಾರ ಎಸಗುವ ವೇಳೆ ಅಲ್ಲಿಯೇ ಮದ್ಯ ಸೇವಿಸಿದ ದರೋಡೆಕೋರರು ಮಹಿಳೆಗೂ ಸಹ ಬಲವಂತವಾಗಿ ಕುಡಿಸಿದ್ದಾರೆ. ಮಾತ್ರವಲ್ಲ ಸಿಗರೇಟು ತುಂಡುಗಳಿಂದ ಮಹಿಳೆಯ ದೇಹವನ್ನು ಸುಟ್ಟಿದ್ದಾರೆ ಎಂದು ವರದಿಯಾಗಿದೆ.
ಮನೆಯ ಕೊಠಡಿಗಳ ಬೀಗ ಕತ್ತರಿಸಿ, ಬೀರುಗಳನ್ನು ಒಡೆದ ದರೋಡೆಕೋರರು ಚಿನ್ನಾಭರಣ, 2 ಕೆಜಿ ಬೆಳ್ಳಿ ವಸ್ತುಗಳು, 1.5 ಲಕ್ಷ ನಗದು, ಸ್ಕೂಟರ್ ಹಾಗೂ ಎಲ್ಇಡಿ ಟಿವಿಯನ್ನು ಕದ್ದೊಯ್ದಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post