ಅಪಾರ ವನಮೂಲಿಕೆ ಇರುವ, ಸನಿಹದಲ್ಲೇ ಐತಿಹಾಸಿಕ ದೇವಸ್ಥಾನ ಇರುವ ಪಟ್ಟಣದ ತಿರುಮಲ ಪುರ ಗುಡ್ಡ ಅಗೆತ ನಡೆಯುತ್ತಿದ್ದು, ಈ ಗುಡ್ಡದ ಕಿರಿದಾದ ಅರಣ್ಯದಲ್ಲಿ ಅಪರೂಪದ ಔಷಧೀಯ ಸಸ್ಯಗಳು ಇವೆ. ಪಕ್ಷಿಪ್ರಾಣಿಗಳ ಸುರಕ್ಷಿತ ಸ್ಥಳವಾಗಿದೆ. ಈ ಬಗ್ಗೆ ಪಟ್ಟಣ ನಾಗರೀಕರು, ಪರಿಸರಾಸಕ್ತರು ಪುರಸಭೆ ಅಧಿಕಾರಿಗಳಿಗೆ, ತಹಶಿಲ್ದಾರರಿಗೆ ವಿನಾಶ ತಡೆಯುವಂತೆ ಮನವಿ ಸಲ್ಲಿಸಿದ್ದಾರೆ.
Also read: ಕೃಷಿ ಸಬಲೀಕರಣಕ್ಕೆ ನೆರವಾಗಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ
ಈಚೆಗೆ ಪಟ್ಟಣದ ಆರಾಧ್ಯದೈವ ರಂಗನಾಥ ಸ್ವಾಮಿ ದೇವಸ್ಥಾನ ದ ಕೆಳಭಾಗದಲ್ಲಿ ಗುಡ್ಡದ ಅಂಚನ್ನು ಜೆಸಿಬಿ ಮೂಲಕ ಕಡಿದಿದ್ದು ಅಲ್ಲಿದ್ದ ಅನೇಕ ಮರಗಳನ್ನು ಕೆಡವಿ ಗುರುತು ಸಿಗದಂತೆ ಮುಚ್ಚಲಾಗಿದೆ. ಈ ಕೃತ್ಯದಿಂದಾಗಿ ಗುಡ್ಡದ ಮೇಲಿನಿಂದ ಮಳೆಗಾಲದಲ್ಲಿ ಹರಿವ ನೀರು ಅಲ್ಲೆ ಹತ್ತಿರದಲ್ಲಿರುವ ನದಿಗೆ ಸೇರಿ ನದಿ ಕ್ರಮೇಣ ಮುಚ್ಚುವ ಸಾಧ್ಯತೆ ಇದೆ. ಹತ್ತಿರವಿರುವ ಜಮೀನುಗಳ ಬೆಳೆಗೂ ತೊಂದರೆ ಆಗಲಿದೆ ಎಂದು ಪರಿಸರಾಸಕ್ತರು ಮನವಿಯಲ್ಲಿ ತಿಳಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post