ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ಕಾರ್ತಿಕ ಶುದ್ಧ ತ್ರಯೋದಶಿಯಂದು ಶ್ರೀ ಕಾಶೀ ಸುಬ್ರಹ್ಮಣ್ಯ ಬಾಲ ಚಿಂತಾಮಣಿ ಸ್ವಾಮಿಗಳ ಆರಾಧನೆಯನ್ನು ಚಿಂತಾಮಣಿ ಮಠದಲ್ಲಿ ಶ್ರೀ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ Shivananda Bharathi Chinthamani Shri ನೇತೃತ್ವದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ, ಗುರುಗಳ ಅಪೇಕ್ಷೆಯಂತೆ ಹಾಗೂ ಶ್ರೀ ಚಿಂತಾಮಣಿ ಮಠದ ಇತಿಹಾಸದ ಆಧಾರದ ಮೇಲೆ ಶ್ರೀ ಚಿಂತಾಮಣಿ ಮಠವನ್ನು “ಜಗದ್ಗುರು ಶಂಕರಾಚಾರ್ಯರ ಮಹಾಸಂಸ್ಥಾನಮ್ ಚಿಂತಾಮಣಿ ಪೀಠಮ್” ಎಂದು ಘೋಷಿಸುತ್ತಿದ್ದೇವೆ. ಇನ್ನು ಮುಂದೆ ಈ ಮಠವು ಇದೇ ನಾಮದಿಂದ ಕಾರ್ಯನಿರ್ವಹಿಸುತ್ತದೆ ಎಂದರು.

Also read: ಸರಿಯಾದ ಕೈಗಳಲ್ಲಿ ಸಂವಿಧಾನವಿದ್ದರೆ ಅದರ ಉದ್ದೇಶಗಳು ಸಾರ್ಥಕ: ಮುಖ್ಯಮಂತ್ರಿ ಸಿದ್ದರಾಮಯ್ಯ
ನಮ್ಮ ಪೂರ್ವಗುರುಗಳ ಹೇಳಿಕೆಯ ಪ್ರಕಾರ ಶ್ರೀ ಚಿಂತಾಮಣಿ ಪೀಠವು ಸಿದ್ಧಿ ಪೀಠ, ಯೋಗ ಪೀಠ. ನಮ್ಮ ಗುರುವರ್ಯರ ಆಶೀರ್ವಾದ ಪಡೆದು ಅವರ ಮಾತಿನಂತೆ ವೈದ್ಯರಾಗಿರುವವರು, ಸಿರಿವಂತರಾಗಿರುವವರು ಅನೇಕರು. ಹಾಗೆಯೇ ಅವರನ್ನು ದುರುಪಯೋಗಿಸಿಕೊಂಡವರು ಪತಿತರಾಗಿರುವ ಉದಾಹರಣೆಗಳೂ ಇವೆ ಎಂದರು.
ಮೋಹನ್ ಚಿಕ್ಕ ಭಟ್ ಜ್ಯೋಶಿ ಹಾಗೂ ಗಣೇಶ ಗೋಸಾವಿಯವರು ಆರಾಧನೆಯ ಶಾಸ್ತ್ರವಿಧಿಗಳನ್ನು ಪೂರೈಸಿದರು.











Discussion about this post