ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಬೃಹತ್ ಸ್ವದೇಶಿ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಜನರಿಂದ ತುಂಬಿತುಳುಕುತ್ತಿದೆ.
ನಿನ್ನೆಯಿಂದ ಆರಂಭಗೊಂಡಿರುವ ಸ್ವದೇಶಿ ಮೇಳ ಡಿ.10ರವರೆಗೂ ನಡೆಯಲಿದೆ.
ಏನೆಲ್ಲಾ ಲಭ್ಯವಿದೆ?
ಮೇಳದಲ್ಲಿ ಈಗಾಗಲೇ 224 ಸ್ಟಾಲ್’ಗಳಿವೆ. ವಿವಿಧ ಬಗೆಯ ಕರ ಕುಶಲ ವಸ್ತುಗಳು, ತಿನಿಸು ಅಂಗಡಿಗಳು, ವಾಣಿಜ್ಯಕ್ಕೆ ಸಂಬಂಧಿಸಿದಂತೆ ಶೋ ರೂಂಗಳು, ಮಕ್ಕಳ ಆಟಿಕೆಗಳು ಹೀಗೆ ಹಲವು ಆಟೋಟ ವಸ್ತುಗಳು ಪ್ರದರ್ಶನದಲ್ಲಿ ಮೇಳೈಸುತ್ತಿವೆ.
Also read: ಸ್ವದೇಶಿ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಭಾರತೀಯನ ಕರ್ತವ್ಯ: ಡಾ. ಶಿವಮೂರ್ತಿ ಶಿವಾಚಾರ್ಯ ಕರೆ
ದೇಶಿಯ ಆಹಾರ, ಕ್ರೀಡೆ, ಜಾನಪದ ಕಲಾ ವೈಭವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಅನಾವರಣಗೊಂಡಿವೆ.
ಆಹಾರ ಪ್ರಿಯರಿಗಂತೂ ಹಬ್ಬವೇ ಸರಿ, ಮೇಲ್ಕೋಟೆ ಪುಳಿಯೋಗರೆ, ದಾವಣಗೆರೆ ಬೆಣ್ಣೆದೋಸೆ, ಬಂಗಾರಪೇಟೆ ಚಾಟ್ಸ್, ಹುಬ್ಬಳ್ಳಿ ಗಿರಿಮಿಟ್ ಸಿರಿದಾನ್ಯಗಳ ರೊಟ್ಟಿ, ವಿವಿಧ ಬಗೆಯ ಚಟ್ನಿ, ಹಾಗೂ ಚಟ್ನಿ ಪುಡಿಗಳು, ಮೇಳದಲ್ಲಿವೆ.
ಆರ್ಯುವೇದ ಶಿಬಿರ ಸೇರಿದಂತೆ ಸಂವಾದ, ಯಕ್ಷಗಾನ, ಯೋಗಾಸನ, ಜಾದೂ ಪ್ರದರ್ಶನ, ಡಾ. ಪ್ರವೀಣ್ ಗೋಡ್ಖಿಂಡಿ, ರೈತರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post