ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಪ್ರಾಚೀನ ದೇವಾಲಯಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಬೆಂಗಳೂರು ದೂರವಾಣಿ ನೌಕರರ ಹವ್ಯಾಸಿ ವೀಕ್ಷಣಾ ಬಳಗ 50ನೇ ಪ್ರವಾಸದ ಹೊಸ್ತಿನಲ್ಲಿದ್ದು ಜಿಲ್ಲೆಯ ಹರಿಹರಪುರದಲ್ಲಿ ಡಿ.13ರಂದು ಸುವರ್ಣ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಾಚೀನ ದೇವಾಲಯಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಎನ್.ಆರ್. ಕೃಷ್ಣಮೂರ್ತಿ, ಕೆ.ಎಸ್. ವಿಶ್ವನಾಥ, ಟಿ.ವಿ. ನಟರಾಜಪಂಡಿತ್, ಮಹಮದ್ ಕಲೀಂಉಲ್ಲ, ಎಸ್.ಜಿ.ಶಶಿಧರ್ ಅವರಿಗೆ ಸನ್ಮಾನ ಮತ್ತು ಲಕ್ಷ್ಮೀನರಸಿಂಹ ಪೀಠಂನ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವರಸ್ವತೀ ಮಹಾಸ್ವಾಮಿಗಳವರ ದಿವ್ಯ ಅಮೃತ ಹಸ್ತದಿಂದ ಬಳಗದ ಕಾರ್‍ಯದರ್ಶಿಯಾದ ಕೆಂಗೇರಿ ಚಕ್ರಪಾಣೀಯವರ ‘ದೇಗುಲಗಳ ದಾರಿ’ ಆರನೇ ಸಂಪುಟ ಮತ್ತು ಸುವರ್ಣ ಸೌರಭ ಎಂಬ ಸ್ಮರಣ ಹಂಚಿಕೆಯ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ.
ದೇಶ ಸುತ್ತು ಕೋಶ ಓದು ಎಂಬ ನಮ್ಮ ಹಿರಿಯ ಮಾತಿನಂತೆ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ನಮ್ಮ ಪ್ರಾಚೀನ ದೇವಾಲಯಗಳು ಕೆಲ, ವಾಸ್ತುಶಿಲ್ಪ, ಮೂರ್ತಿ ಶಿಲ್ಪಿಗಳು, ಮತ್ತು ಪುರಾತನ ಪರಂಪರೆ ಮತ್ತು ದೇವಾಲಯ ರಚನೆಯ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆಯನ್ನು ತಿಳಿಸುವ ಪ್ರಮುಖ ಆಕರಗಳಾಗಿವೆ. ಈ ಬಗೆಯ ವಿಚಾರಗಳನ್ನು ಹೊಂದಿರುವ ಪ್ರಾಚೀನ ದೇವಾಲಯಗಳ ಮಹತ್ವವನ್ನು ಅರಿತ ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ವೀಕ್ಷಣಾ ಬಳಗ ಮತ್ತು ಅವರ ಸ್ನೇಹಿತರು ತಮ್ಮ ಕೆಲಸದ ಬಿಡುವಿನ ವೇಳೆಯಲ್ಲಿ ಕನ್ನಡ ನಾಡಿನಾದ್ಯಂತ ಇರುವ ಪ್ರಾಚೀನ ದೇವಾಲಯಗಳ ವೀಕ್ಷಣೆ ಮತ್ತು ಅವುಗಳ ರಕ್ಷಣೆಯ ಬಗ್ಗೆ ಬೆಳಕನ್ನು ಚೆಲ್ಲುವ ಕಾರ್ಯಯವನ್ನು ಮಾಡುತ್ತಾ 49 ಪ್ರವಾಸಗಳನ್ನು ಯಶಸ್ವಿಯಾಗಿ ಪೂರೈಸಿ, 50ನೇ ಪ್ರವಾಸದ ಹೊಸ್ತಿನಲ್ಲಿದೆ.
Also read: ಅಬ್ಬಬ್ಬಾ! ಅಯೋಧ್ಯೆ ರಾಮಮಂದಿರ ಇಷ್ಟು ವರ್ಷ ಅಲುಗಾಡುವುದಿಲ್ಲ: ಭೂಕಂಪವಾದರೂ, ಇಷ್ಟು ತೀವ್ರತೆವರೆಗೂ ಡೋನ್ಟ್‌ಕೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post