ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಂಸತ್ ಭವನಕ್ಕೆ ಪಾಸ್ ಮೂಲಕ ಪ್ರವೇಶಿಸಿದ ಇಬ್ಬರು ಅಪರಿಚಿತರು ಆಗಮಿಸಿ, ಲೋಕಸಭಾ ಕಲಾಪ ನಡೆಯುವ ವೇಳೆ ಸದನಕ್ಕೆ ನುಗ್ಗಿ ಕೆಮಿಕಲ್ ಸ್ಪ್ರೇ ದಾಳಿ Chemical Spray Attack ನಡೆಸಿದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಖಲಿಸ್ತಾನಿ ಸಂಘಟನೆಯ ಕೈವಾಡ
ಸಂಸತ್ ಭವನದ ಮೇಲೆ ಉಗ್ರರು ದಾಳಿ ನಡೆಸಿ ಸರಿಯಾಗಿ 22 ವರ್ಷದ ಆದ ಇಂದೇ ಮತ್ತೆ ನೂತನ ಸಂಸತ್ ಭವನದ ಲೋಕಸಭಾ ಸದನದಲ್ಲಿ ಇಬ್ಬರು ಅಪರಿಚಿತರು ಕೆಮಿಕಲ್ ಸ್ಪ್ರೇ ದಾಳಿ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಾಥಮಿಕ ಮಾಹಿತಿಯನ್ವಯ, ಈ ದಾಳಿಯ ಹಿಂದೆ ಖಲಿಸ್ತಾನಿ ಉಗ್ರ ಸಂಘಟನೆಯ ಕೈವಾಡ ವ್ಯಕ್ತವಾಗಿದೆ.
ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ದಾಳಿಯ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ, ಪನ್ನುನ್ ನೀಡಿದ ಡೆಡ್ಲೈನ್ ದಿನವೇ ಇದೀಗ ಇಬ್ಬರು ಅಪರಿಚಿತರು ಸದನಗೊಳಗೆ ನುಗ್ಗಿ ದಾಳಿ ಮಾಡಿದ್ದಾರೆ.
ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್
ಲೋಕಸಭೆಯಲ್ಲಿ ಕೆಮಿಕಲ್ ಸ್ಪ್ರೇ ದಾಳಿ ನಡೆಸಿದ ಇಬ್ಬರು ಅಪರಿಚಿತರು ಮೈಸೂರು ಸಂಸದ ಪ್ರತಾಪ್ ಸಿಂಹ Mysore MP Prathap Simha ಅವರ ಕಚೇರಿಯಿಂದ ಪಾಸ್ ಪಡೆದಿದ್ದರು ಎಂದು ಹೇಳಲಾಗಿದೆ.
ನಕಲಿ ದಾಖಲೆ ನೀಡಿ, ಸಾಗರ್ ಶರ್ಮಾ ಹೆಸರಿನಲ್ಲಿ ಯುವಕನೊಬ್ಬ ಹಾಗೂ ನೀಲಂ ಕೌರ್ ಎಂಬಾಕೆ ಸೇರಿ ಇಬ್ಬರು ಪಾಸ್ ಪಡೆದಿದ್ದರು ಎನ್ನಲಾಗಿದೆ.
ಪುರುಷನನ್ನು ಮಹಾರಾಷ್ಟ್ರ ಮೂಲದ ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದ್ದು, 42 ವರ್ಷದ ಮಹಿಳೆಯನ್ನು ಹರಿಯಾಣದ ಹಿಸಾನರ್ ನೀಲಂ ಎಂದು ಗುರುತಿಸಲಾಗಿದೆ.
Also read: ಭಾರತವನ್ನು ಅತಿಕ್ರಮಿಸಿ, ಮೋದಿಯನ್ನು ಬಂಧಿಸುತ್ತಾನಂತೆ ಪಾಕ್ ಸೇನೆಯ ಈ ಅಧಿಕಾರಿ!
ಮೈಸೂರಿನವರು ಎಂದು ಹೇಳಿ ಪಾಸ್ ಪಡೆದ ಈ ಇಬ್ಬರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಆದರೆ, ಏಕಾಏಕಿ ಸದನದ ಒಳಕ್ಕೆ ಜಿಗಿದು, ತಮ್ಮ ಶೂ ಒಳಗೆ ಇರಿಸಿಕೊಂಡಿದ್ದ ಕೆಮಿಕಲ್ ಸ್ಪ್ರೇ ದಾಳಿ ನಡೆಸಿದ್ದಾರೆ.
ಪ್ರತಾಪ್ ಸಿಂಹ ಹೆಸರಿಗೆ ಮಸಿ ಬಳಿಯುವ ಯತ್ನ
ನಕಲಿ ದಾಖಲೆ ನೀಡಿ ಮೈಸೂರು ಸಂಸದರ ಕಚೇರಿ ಸಿಬ್ಬಂದಿ ಮೇಲೆ ಒತ್ತಡ ಹೇರಿ ಇಬ್ಬರು ಪಾಸ್ ಪಡೆದಿದ್ದರು. ಉದ್ದೇಶ ಪೂರ್ವಕವಾಗಿ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದು, ದಾಳಿ ನಡೆಸಿದ ದುಷ್ಕರ್ಮಿಗಳು ಮೈಸೂರು ಸಂಸದರ ಹೆಸರಿಗೆ ಮಸಿ ಬಳಿಯುವ ಹಾಗೂ ಅವರನ್ನು ಸಿಲುಕಿಸುವ ಯತ್ನ ಮಾಡಿದರೇ ಎಂಬ ವಿಷಯ ಸಾರ್ವಜನಿಕ ವಲಯದಲ್ಲಿ ಈಗ ಚರ್ಚೆಯಾಗುತ್ತಿದೆ.
ಇಬ್ಬರು ಬಂಧನ
ಲೋಕಸಭೆಯಲ್ಲಿ ಕೆಮಿಕಲ್ ಸ್ಪ್ರೇ ದಾಳಿ ನಡೆಸಿದ ಓರ್ವ ಯುವಕ ಹಾಗೂ ಯುವತಿಯನ್ನು ಭದ್ರತಾ ಅಧಿಕಾರಿಗಳು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















