ಕಲ್ಪ ಮೀಡಿಯಾ ಹೌಸ್ | ಸೊರಬ |
ಮಂಗಳೂರಿನಲ್ಲಿ #Mangalore ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸೊರಬ #Soraba ನವಚೇತನ ಬುದ್ಧಿಮಾಂಧ್ಯ ಶಾಲೆಯ ಮಕ್ಕಳು 4ನೆಯ ಸ್ಥಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಂಗಳೂರಿನ ಶಕ್ತಿನಗರ ಸಾನಿಧ್ಯ ವಿಶೇಷ ಮಕ್ಕಳ ವಸತಿ ಮತ್ತು ತರಬೇತಿ ಸಂಸ್ಥೆಯ 20ನೇ ವರ್ಷಾಚರಣೆಯ ಅಂಗವಾಗಿ ಈ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಟ್ವಿಂಕ್ಲಿಂಗ್ ಸ್ಟಾರ್ ರಾಜ್ಯ ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ #Dance ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 35 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಶಿವಮೊಗ್ಗ #Shivamogga ಜಿಲ್ಲೆಯನ್ನು ಪ್ರತಿನಿಧಿಸಿದ್ದ ನಗರದ ನವೇಚೆತನ ಬುದ್ದಿಮಾಂಧ್ಯ ಮಕ್ಕಳ ಶಾಲೆ ವಿದ್ಯಾರ್ಥಿಗಳು 4ನೆಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ, ಕಾರ್ಯದರ್ಶಿ ರಾಮಪ್ಪ, ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕೆ.ಬಿ. ಪುಟ್ಟರಾಜು, ಶಿಕ್ಷಕಿ ಸುವರ್ಣ, ಮಂಗಳ, ಎಸ್. ಪೂಜಾರ್, ವಾರ್ಡನ್ ಪಲ್ಲವಿ, ಶಿಕ್ಷಕಿ ಗಾಯತ್ರಿ ನಾಯಕ್, ಮಲೆನಾಡು ಸಿರಿ ಸೇವಾ ಬಳಗದ ರಾಜು ಹಿರಿಯಾವಲಿ ಉಪಸ್ಥಿತರಿದ್ದರು.
ಈ ಮಕ್ಕಳ ಸಾಧನೆಗೆ ತಾಲೂಕಿನ ಪ್ರಮುಖರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post