ಕಲ್ಪ ಮೀಡಿಯಾ ಹೌಸ್ | ಉಡುಪಿ |
ಸ್ಯಾಂಡಲ್’ವುಡ್ ಖ್ಯಾತ ನಟಿ ಪೂಜಾ ಗಾಂಧಿ ದಂಪತಿ ಉಡುಪಿ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.
ಪೂಜಾ ಗಾಂಧಿ ಅವರು ತಮ್ಮ ಪತಿ ವಿಜಯ್ ಘೋರ್ಪಡೆ ಅವರೊಂದಿಗೆ ನಿನ್ನೆ ಉಡುಪಿಗೆ ಭೇಟಿ ನೀಡಿದ್ದರು. ಶ್ರೀಕೃಷ್ಣ ಮಠಕ್ಕೆ ತೆರಳಿದ ಅವರು ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಆನಂತರ ತೀರ್ಥಪ್ರಸಾದ ಸ್ವೀಕರಿಸಿದರು.
ಆನಂತರ ಮಧೂರು ನಾರಾಯಣ ಶರಳಾಯ ಅವರ ನಿವಾಸಕ್ಕೆ ತೆರಳಿ ಆತಿಥ್ಯ ಸ್ವೀಕರಿಸಿದರು. ಶರಳಾಯ ಅವರ ಕುಟುಂಬದ ವತಿಯಿಂದ ಪೂಜಾ ಗಾಂಧಿ ದಂಪತಿಯನ್ನು ಶಾಸ್ತ್ರೋಕ್ತವಾಗಿ ಅಭಿನಂದಿಸಲಾಯಿತು.
ಪೂಜಾ ಗಾಂಧಿ ಅವರು ಇತ್ತೀಚೆಗಷ್ಟೇ ಲಾಜೆಸ್ಟಿಕ್ ಕಂಪೆನಿ ಮಾಲೀಕ ವಿಜಯ್ ಘೋರ್ಪಡೆ ಅವರನ್ನು ಮಂತ್ರ ಮಾಂಗಲ್ಯದ ಪ್ರಕಾರ ಕೈಹಿಡಿದರು. ವಿವಾಹದ ನಂತರ ತೀರ್ಥಹಳ್ಳಿ ತಾಲೂಕಿನಲ್ಲಿರುವ ಕವಿಶೈಲಕ್ಕೂ ಭೇಟಿ ನೀಡಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















