ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಹೊರತರಲಾಗಿರುವ 2024ರ ವಾರ್ಷಿಕ ಕ್ಯಾಲೆಂಡರನ್ನು ಅನಾವರಣಗೊಳಿಸಲಾಯಿತು.
ವಿಐಎಸ್’ಎಲ್ ಗುತ್ತಿಗೆದಾರರು ಹಾಗೂ ಕಾರ್ಮಿಕರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘ ಗುತ್ತಿಗೆ ಕಾರ್ಮಿಕರ ಹೋರಾಟವನ್ನು ಗುರುತಿಸಿ ಅವರ ವಾರ್ಷಿಕ ಕ್ಯಾಲೆಂಡರ್ ಅನಾವರಣವನ್ನು ನಮ್ಮ ಸಮ್ಮುಖದಲ್ಲಿ ನೆರವೇರಿಸಿದ್ದಾರೆ. ಇಂತಹ ಒಂದು ಕಾರ್ಯ ನಮ್ಮೆಲ್ಲರಿಗೂ ಸಂತೋಷದ ವಿಚಾರವಾಗಿದೆ. ಸೈನಿಕರು ದೇಶಕ್ಕಾಗಿ ಶ್ರಮಿಸುತ್ತಿದ್ದರೆ, ಗುತ್ತಿಗೆ ಕಾರ್ಮಿಕರು ಕಾರ್ಖಾನೆಗಾಗಿ ಶ್ರಮಿಸುತ್ತಿದ್ದಾರೆ ಎಂದರು.
Also read: ಭದ್ರಾವತಿ ಶಾಸಕರ ಆಪ್ತ ಸಹಾಯಕ ದುರ್ಮರಣ | ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಕಾರ್ಯದರ್ಶಿ ರಾಕೇಶ್ ಮಾತನಾಡಿ, ಮಾಜಿ ಸೈನಿಕರ ಬೆಂಬಲ ಸಿಕ್ಕಿದ್ದು ಕಾರ್ಖಾನೆಯ ಉಳಿವಿನ ಹೋರಾಟಕ್ಕಾಗಿ ಆನೆಯ ಬಲ ಸಿಕ್ಕಂತಾಗಿದೆ ಎಂದರು.
ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವೆಂಕಟಗಿರಿ ಮಾತನಾಡಿ, ವಿಶ್ವೇಶ್ವರಯ್ಯ ಕಬ್ಬಿನ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಪ್ರತಿಯೊಬ್ಬ ಭದ್ರಾವತಿಯ ನಾಗರೀಕರ ಕರ್ತವ್ಯವಾಗಿದೆ. ಗುತ್ತಿಗೆದಾರರ 341 ದಿನದ ನಿರಂತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಸಹ ಕಾರ್ಯದರ್ಶಿ ಹರೀಶ್ ಮಾತನಾಡಿ, ಸಾವಿರಾರು ಜನಕ್ಕೆ ಜೀವನವನ್ನು ನೀಡಿದಂತಹ ಕಾರ್ಖಾನೆಯ ಉಳಿವಿಗೆ ನಾವೆಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಬೇದಾರ್ ಗುಲ್ಗುಲೆರವರು ಮಾತನಾಡಿ, ಗುತ್ತಿಗೆದಾರರ ಮನೋಬಲವನ್ನು ಬಲಪಡಿಸಿದರು.
ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಮಹೇಶ್, ಮಾಜಿ ಸೈನಿಕರಗಳಾದಂತಹ ಬೋರೇಗೌಡ, ಉದಯ್, ದೇವರಾಜ್, ಸುರೇಶ್, ಶ್ರೀಧರ ಶೇಷಾಚಲ ಕುಮಾರ್ ಅಶೋಕ್ ರಮೇಶ್ ಪ್ರಸಾದ್ ಹಾಗೂ ಗುತ್ತಿಗೆ ಕಾರ್ಮಿಕರ ಪದಾಧಿಕಾರಿಗಳು ಹಾಗೂ ಸಮಸ್ತ ಗುತ್ತಿಗೆದಾರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















