ಕಲ್ಪ ಮೀಡಿಯಾ ಹೌಸ್ | ಗೌಹಾಟಿ |
ಅಸ್ಸಾಂನಲ್ಲಿ ಶಾಶ್ವತ ಶಾಂತಿ ಸ್ಥಾಪಿಸಿ, ಇಲ್ಲಿನ ಸರ್ವತೋಮುಖ ಅಭಿವೃದ್ಧಿಯೆಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ Amith Shah ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಬಂಡುಕೋರ ಉಲ್ಫಾ ಸಂಘಟನೆಯ ಜೊತೆಗಿನ ಐತಿಹಾಸಿಕ ಒಪ್ಪಂದವನ್ನು ಶ್ಲಾಘಿಸುತ್ತೇವೆ, ಇದು ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಮಹತ್ವದ ಕ್ರಮಗಳಲ್ಲಿ ಒಂದಾಗಿದೆ ಎಂದರು.

Also read: ತನ್ನ ಕೈ ಕಚ್ಚಿದ `ಇಲಿ’ಯ ವಿರುದ್ಧ ಸೇಡು ತೀರಿಸಿಕೊಂಡ ಯುವತಿ | ಆದರೆ ಹೇಗೆ ಗೊತ್ತಾ?
ಪ್ರಧಾನಿ ನರೇಂದ್ರ ಮೋದಿಯವರ PMNarendraModi ಶಾಂತಿ ಮತ್ತು ಸೌಹಾರ್ದತೆಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಅಸ್ಸಾಂ ಸೇರಿದಂತೆ ಇಡೀ ಈಶಾನ್ಯ ಪ್ರದೇಶದಲ್ಲಿ ಹಿಂಸಾಚಾರದ ಕರಾಳ ಅಧ್ಯಾಯವನ್ನು ಕೊನೆಗೊಳಿಸಲು ಗೃಹ ಸಚಿವ ಅಮಿತ್ ಶಾರವರ ನೇತೃತ್ವದಲ್ಲಿ ಶ್ಲಾಘನೀಯ ಪ್ರಯತ್ನಗಳು ನಡೆಯುತ್ತಿವೆ. ಡಿಸೆಂಬರ್ 29, 2023 ರಂದು ಸಹಿ ಹಾಕಲಾದ ಈ ತ್ರಿಪಕ್ಷೀಯ ಶಾಂತಿ ಒಪ್ಪಂದವು ಈಶಾನ್ಯ ರಾಜ್ಯಗಳಲ್ಲಿನ ದಶಕಗಳಷ್ಟು ಹಳೆಯದಾದ ಬಂಡಾಯವನ್ನು ಕೊನೆಗೊಳಿಸಲಿದೆ.

ಅಸ್ಸಾಂನಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಗೃಹ ಸಚಿವರ ಈ ನಿರ್ಣಾಯಕ ಹೆಜ್ಜೆ ಇಡೀ ಈಶಾನ್ಯದ ಭವಿಷ್ಯದ ಅಭಿವೃದ್ಧಿಗೆ ಮೈಲಿಗಲ್ಲಾಗಲಿದೆ. ಈಶಾನ್ಯ ರಾಜ್ಯಗಳಲ್ಲಿ ಒಂದರ ನಂತರೊAದರAತೆ ನಿರಂತರವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿರುವ ಶಾರವರ ಪ್ರಯತ್ನಗಳು ಹಿಂಸಾಚಾರ ಮತ್ತು ಭಯೋತ್ಪಾದನೆ ಮುಕ್ತ ಭಾರತದ ಸೃಷ್ಟಿಗೆ ಕೊಡುಗೆ ನೀಡುತ್ತಿವೆ.

ಕಳೆದ ಒಂಬತ್ತು ವರ್ಷಗಳ ಸಾಧನೆಗಳನ್ನು ನಾವೊಮ್ಮೆ ತಿರುಗಿ ನೋಡಿದಾಗ, ದೇಶವು ಸುರಕ್ಷಿತಕೈಯಲ್ಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಮೋದಿ ಮತ್ತು ಶಾ ಸಮರ್ಥ ನೇತೃತ್ವದಲ್ಲಿ ಭಯೋತ್ಪಾದನೆಯ ಪರಿಣಾಮಕಾರಿಯಾಗಿ ನಿಗ್ರಹದೊಂದಿಗೆ, ಭಾರತವು ಉಜ್ವಲ ಮತ್ತು ಹೆಚ್ಚು ಸುರಕ್ಷಿತ ಭವಿಷ್ಯಕ್ಕಾಗಿ ಸನ್ನದ್ಧವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post