ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ #Shivamogga 15 ವರ್ಷಗಳನ್ನು ಪೂರೈಸಿರುವ ಶಂಕರ ಕಣ್ಣಿನ ಆಸ್ಪತ್ರೆಯು #ShankaraEyeHospital ಸಾರ್ವಜನಿಕರ ಸೇವೆಗೆ ಸಿದ್ಧವಾಗಿದ್ದು, ಸಾರ್ವಜನಿಕ ವಲಯದ ಸುಮಾರು 15 ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ನೇತ್ರಾ ತಪಾಸಣೆ ಮಾಡಲಾಗುವುದು ಎಂದು ಆಸ್ಪತ್ರೆಯ ಪೋಷಕ ಡಾ. ನರೇಂದ್ರ ಭಟ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗದಲ್ಲಿ 2008ರಲ್ಲಿ ಸ್ಥಾಪನೆಗೊಂಡಿತು. ಆ ಮೂಲಕ ಸೇವೆಯನ್ನೇ ಪ್ರಧಾನವಾಗಿಟ್ಟುಕೊಂಡು ಸುಮಾರು 13 ಜಿಲ್ಲೆಗಳ ನಾಗರೀಕರಿಗೆ ಕೈಗೆಟುಕುವ ವೆಚ್ಚದಲ್ಲಿ ಮತ್ತು ಹಲವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು #Surgery ಮಾಡುತ್ತಾ ಬಂದಿದ್ದೇವೆ. ಈ ಸಂದರ್ಭದಲ್ಲಿ ನಾವು ಧನ್ಯವಾದಗಳು ಮಲೆನಾಡು ಎಂದು ಹೇಳುತ್ತೇವೆ ಎಂದರು.
ಇದರ ಮುಂದುವರಿದ ಭಾಗವಾಗಿ ನಾಳೆಯಿಂದಲೇ ನಗರದ ವಿವಿಧ ಇಲಾಖೆಗಳ ಸಿಬ್ಬಂದಿಗಳು ಮಾಜಿ ಸೈನಿಕರು, ಸೇವೆಯಲ್ಲಿರುವ ಸೇನಾ ಸಿಬ್ಬಂದಿ ಪೊಲೀಸ್ ಇಲಾಖೆ, ಸ್ವಾತಂತ್ರ್ಯ ಹೋರಾಟಗಾರರು ವೃದ್ಧಾಶ್ರಮದಲ್ಲಿ ಇರುವವರಿಗೆ ಪಾಲಿಕೆಯ ಸ್ವಚ್ಛತಾ ನೌಕರರಿಗೆ, ವಿವಿಧ ವಾಹನಗಳ ಚಾಲಕರಿಗೆ, ಉದ್ಯೋಗಿಗಳ ಅವಲಂಭಿತ ಪೋಷಕರಿಗೆ, ಶಿಕ್ಷಕರಿಗೆ, ಆಶಾ ಕಾರ್ಯಕರ್ತರು ಸೇರಿದಂತೆ ವಿವಿಧ ಕಾರ್ಯಕರ್ತರಿಗೆ, ಪತ್ರಕರ್ತರಿಗೆ, ಶಿಮೂಲ್ ಸದಸ್ಯರಿಗೆ, ಕೇಂದ್ರ ಕಾರಗೃಹ ಸದಸ್ಯರಿಗೆ, ಬ್ಯಾಂಕ್, ಪೋಸ್ಟ್ ಆಫೀಸ್, ಅಬಕಾರಿ, ಔಷಧ, ಗೃಹರಕ್ಷಕ ಹೀಗೆ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಶಾಲಾ ಮಕ್ಕಳಿಗೆ ಇಡೀ ವರ್ಷ ಉಚಿತವಾಗಿ ತಪಾಸಣೆ ಮಾಡುವ ಉದ್ದೇಶವನ್ನು ನಮ್ಮ ಆಸ್ಪತ್ರೆ ಹಮ್ಮಿಕೊಂಡಿದೆ ಎಂದು ವಿವರಿಸಿದರು.
ನಾಳೆ ಜಿಲ್ಲಾಧಿಕಾರಿಗಳು ಈ ಕಾರ್ಯಕ್ಕೆ ಚಾಲನೆ ನೀಡುವರು. ಇವರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ, ಸಿಇಓ, ಪಾಲಿಕೆಯ ಆಯುಕ್ತರು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಸಹಕಾರ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳ ತಪಾಸಣೆ ಮಾಡುವ ಮೂಲಕ ಈ ವರ್ಷದ ನಮ್ಮ ಸೇವೆಯನ್ನು ವಿಸ್ತಾರ ಮಾಡುತ್ತಿದ್ದೇವೆ ಎಂದರು.
ಡಾ.ಮಹೇಶ್ ಮಾತನಾಡಿ, ಶಂಕರ ಆಸ್ಪತ್ರೆ ಇದುವರೆಗೂ 6.72ಲಕ್ಷ ರೋಗಿಗಳನ್ನು ಪರೀಕ್ಷಿಸಿದೆ. ಸುಮಾರು 2.5ಲಕ್ಷ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ಲಕ್ಷಾಂತರ ಜನರ ಮಕ್ಕಳಿಗೆ ಕಣ್ಣಿನ ಆರೈಕೆಯನ್ನು ಉಚಿತವಾಗಿ ಒದಗಿಸಿದ್ದೇವೆ. ನಮ್ಮದು ವಿಶ್ವ ದರ್ಜೆಯ ನೇತ್ರ ಚಿಕಿತ್ಸಾಲಯವಾಗಿದೆ. ನಾವು ಶೇ.80ರಷ್ಟು ಸೇವೆ ರೂಪದಲ್ಲಿ ಚಿಕಿತ್ಸೆ ನೀಡುತ್ತೇವೆ. ಶೇ.20ರಷ್ಟು ಕೆಗೆಟುಕುವ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ. ಒಟ್ಟಾರೆ ಸೇವೆಯೇ ನಮ್ಮ ಆದ್ಯತೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಗಾಯಿತ್ರಿ ಶಾಂತರಾಮ್, ಡಾ.ಕವಿತಾ, ಡಾ.ಕಮಲಾ, ಡಾ.ರವಿಶಂಕರರ್, ಡಾ.ಮಲ್ಲಿಕಾರ್ಜುನ, ಅನಿತಾ, ಪ್ರದೀಪ್, ರಂಜಿತಾ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















