ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ಚಿಂತಾಮಣಿ ಪೀಠದ ಶ್ರೀ ಶಿವಾನಂದ ಭಾರತಿ ಸ್ವಾಮಿಗಳು ಜಿಲ್ಲೆಯ ಮರಿಯಮ್ಮನ ಹಳ್ಳಿಯ ಅಲೆಮಾರಿ ಸಮುದಾಯದ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ಗುರುಗಳು ಸಮುದಾಯದವರನ್ನು ಕೂರಿಸಿಕೊಂಡು ಯೋಗಕ್ಷೇಮವನ್ನು ವಿಚಾರಿಸಿದರು. ಕೋಲಿಗೆ ಒಂದು ಬುಟ್ಟಿ ಕಟ್ಟಿ, ವಸ್ತ್ರತೊಡಿಸಿ ಅದನ್ನು ದೇವತಾ ಮೂರ್ತಿಯಂತೆ ಆರಾಧಿಸುವ ಸಂಪ್ರದಾಯ ಆ ಸಮುದಾಯದವರದ್ದು. ಸೀತಾ ಮಾತೆ, ದುರ್ಗಾಪರಮೇಶ್ವರಿ ಪ್ರತೀಕಗಳಲ್ಲಿದ್ದವು. ಶ್ರೀಶ್ರೀ ಗಳು ಆ ದೇವತಾ ಪ್ರತೀಕಗಳಿಗೆ ಮಂಗಳಾರತಿ ಮಾಡಿದರು.
ದೇವಿ ಮಹಾತ್ಮೆ, ಜ್ಞಾನ ಸಿಂಧು, ಯೋಗಿಯ ಆತ್ಮಕಥೆ, ಶಂಕರಾಚಾರ್ಯರ ಅಷ್ಟೋತ್ತರ ಶತನಾಮಾವಳಿ ಪುಸ್ತಕಗಳು ಆ ದೇವಾಲಯದಲ್ಲಿ ಇದ್ದವು. ವಿಶೇಷ ದಿನಗಳಲ್ಲಿ ಆ ಸಮುದಾಯದವರು ಅವುಗಳನ್ನು ಪಾರಾಯಣ ಮಾಡುತ್ತಾರಂತೆ. ಶ್ರೀ ಗುರುಗಳು ಅವರಿಗೆಲ್ಲ ಆದಿವಾಸಿ, ಅಲೆಮಾರಿ ಸಮುದಾಯದ ನಾಯಕ, ಹೋರಾಟಗಾರ ಬಿರ್ಸಾ ಮುಂಡನ ತ್ಯಾಗದ ಕಥೆಯನ್ನು ಹೇಳಿದರು.
Also read: ಮುಸ್ಲಿಮರ ಓಲೈಕೆಗಾಗಿ ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಹೋಗುತ್ತಿಲ್ಲ: ಆರ್.ಅಶೋಕ್ ಆಕ್ರೋಶ
ಒಗ್ಗಟ್ಟಾಗಿದ್ದು ಕಟುಂಬ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಪ್ರವಚನ ನೀಡಿದರು. ಯಾವುದೇ ಭೇದಭಾವ ತೋರದೆ ಅವರಿಗೆಲ್ಲ ಶ್ರೀರಾಮ ಮಂತ್ರ ಉಪದೇಶಕೊಟ್ಟರು. ಜ.22 ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಸ್ಥಾಪನೆಯಾಗುವ ಸಮಯದಲ್ಲಿ ಎಲ್ಲರೂ ಸೇರಿ ರಾಮನಿಗೆ ಮಂಗಳಾರತಿ ಬೆಳಗಿ ಸಿಹಿಹಂಚಲು ಆದೇಶಿಸಿದರು.
ವಿಶೇಷವಾಗಿ, ಆ ಸಮುದಾಯದ ಹೆಣ್ಣುಮಕ್ಕಳ ಗುಂಪೊAದು ದೇವಸ್ಥಾನದ ಒಳಗೆ ಬಾರದೆ ದೂರನಿಂತು ಗುರುಗಳಿಗೆ ನಮಸ್ಕರಿಸುತ್ತಿದ್ದರು. ಶ್ರೀ ಗುರುಗಳು ಸ್ವತಃ ತಾವೇ ಆ ತಾಯಂದಿರ ಹೋಗಿ ಅವರಿಗೆಲ್ಲ ಅಯೋಧ್ಯೆಯ ರಾಮ ಮಂತ್ರಾಕ್ಷತೆ ಕೈಗೆ ಕೊಟ್ಟು ಮಾತನಾಡಿಸಿ ಅನುಗ್ರಹಿಸಿದರು.
ತಾರತಮ್ಯದ ಲವಲೇಶವೂ ಇಲ್ಲದೆ ಗುರುಗಳು ಎಲ್ಲರಿಗೂ ಪ್ರೀತಿಯಿಂದ ಮಾತನಾಡಿಸಿದ್ದನ್ನು ಕಂಡು ಸಮುದಾಯದ ಜನರು ಹರ್ಷೋದ್ಗರಿಸಿದರು.
(ವರದಿ: ಎಂ.ಎಂ. ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post