ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅಯೋಧ್ಯೆಯಲ್ಲಿ #Ayodhya ರಾಮಮಂದಿರ ನಿಮಾರ್ಣವಾಗಬೇಕು ಎಂಬುದು ದೈವಿಕ ಕನಸಾಗಿದ್ದು, ಇದಕ್ಕಾಗಿಯೇ ವಿಧಿ ಪ್ರಧಾನಿ ನರೇಂದ್ರ ಮೋದಿ #NarendraModi ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ #LKAdvani ಭಾವನಾತ್ಮಕವಾಗಿ ಅಭಿಪ್ರಾಯಪಟ್ಟಿದ್ದಾರೆ.
`ರಾಮ ಮಂದಿರ ನಿರ್ಮಾಣ್, ಏಕ ದಿವ್ಯ ಸ್ವಪ್ನ ಕಿ ಪೂರ್ತಿ’ (ರಾಮ ಮಂದಿರ ನಿರ್ಮಾಣ – ದಿವ್ಯ ಕನಸಿನ ಈಡೇರಿಕೆ) ಎಂಬ ಶೀರ್ಷಿಕೆಯೊಂದಿಗೆ ಅಡ್ವಾಣಿ ಅವರು ಬರೆದಿರುವ ಈ ಲೇಖನದಲ್ಲಿ ರಾಮಮಂದಿರ #RamaMandir ನಿರ್ಮಾಣಕ್ಕಾಗಿ 33 ವರ್ಷಗಳ ಹಿಂದೆ ನಡೆಸಿದ ರಥಯಾತ್ರೆಯನ್ನು ಸ್ಮರಿಸಿಕೊಂಡು, ಭಾವನಾತ್ಮಕವಾಗಿ ಹಳೆಯ ಪುಟಗಳನ್ನು ತೆರೆದಿಟ್ಟಿದ್ದಾರೆ.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿಯೇ ಶ್ರೀರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ಒಂದು ದೈವಿಕ ಕನಸಾಗಿದ್ದು, ಅದನ್ನು ವಿಧಿ ಬಹಳ ಹಿಂದೆಯೇ ನಿರ್ಧರಿಸಿತ್ತು. ಈ ಒಂದು ಕಾರ್ಯಕ್ಕಾಗಿಯೇ ವಿಧಿಯೇ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹೇಳುವ ಮೂಲಕ ತಮ್ಮ ಮುತ್ಸದ್ದಿತನಕ್ಕೆ ತಕ್ಕಂತೆ ಅಭಿಪ್ರಾಯಪಟ್ಟಿದ್ದಾರೆ.
ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಡ್ವಾಣಿ ಅವರು, ತಮ್ಮ ರಥಯಾತ್ರೆ #RathaYatra ಹಾಗೂ ರಾಮಮಂದಿರ ನಿರ್ಮಾಣ ಕುರಿತು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮನೇ #LordRama ತನ್ನ ಭಕ್ತ ಮೋದಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇದೆ ದೈವಿಕ ನಿರ್ಣಯ ಎಂದಿದ್ದಾರೆ.

ಜ.22ರಂದು ಪ್ರಾಣಪ್ರತಿಷ್ಠೆಗೊಳುತ್ತಿರುವ ಕ್ಷಣವನ್ನು ಪ್ರತಿ ಭಾರತೀಯನೂ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಶ್ರೀರಾಮನ ಪ್ರತಿಷ್ಠಾಪನೆಗೊಳ್ಳುವ ಜೊತೆಯಲ್ಲಿ ಪ್ರಭು ರಾಮನ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಮಂದಿರ ನಿರ್ಮಾಣ ಹೋರಾಟ ಆರಂಭದಲ್ಲಿ ಮುಂದಡಿ ಇಟ್ಟಿದ್ದ ತಮ್ಮ ಆತ್ಮೀಯ ಗೆಳೆಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನೆದು ಅಡ್ವಾಣಿ ಭಾವುಕರಾಗಿದ್ದರೆ. ಈ ಒಂದು ಐತಿಹಾಸಿಕ ಕ್ಷಣದಲ್ಲಿ ಅಟಲ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಈ ಲೇಖನದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗಬೇಕೆಂಬ ದೈವಿಕ ಕನಸು ನನಸಾಗಿದೆ ಎಂದು ಉಲ್ಲೇಖಿಸಿದ್ದಾರೆ. `ರಾಷ್ಟ್ರಧರ್ಮ’ ಹಿಂದಿ ಪತ್ರಿಕೆಯಲ್ಲಿ ಜ.16ರಂದು ಅಡ್ವಾಣಿಯವರ ಈ ಲೇಖನ ಪ್ರಕಟಗೊಳ್ಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post