ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ Kuvempu University ರಾಷ್ಟ್ರೀಯ ಸೇವಾ ಯೋಜನೆಯ ನೂತನ ಸಂಯೋಜನಾಧಿಕಾರಿಯಾಗಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ, ವಾಗ್ಮಿ, ಬರಹಗಾರ್ತಿ ಡಾ. ಶುಭಾ ಮರವಂತೆ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ಕುಲಸಚಿವ ಡಾ. ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರಿನ ಸುಮಾರು ಹನ್ನೆರಡು ಸಾವಿರ ಸ್ವಯಂಸೇವಕರನ್ನು ಹೊಂದಿರುವ ಕುವೆಂಪು ವಿವಿ ಎನ್’ಎಸ್’ಎಸ್ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅನೇಕ ಸಾಧನೆ ಮಾಡಿದೆ.
Also read: ಪ್ರೀತಿಸಿ 8 ತಿಂಗಳ ಹಿಂದೆ ವಿವಾಹವಾಗಿದ್ದ ತೀರ್ಥಹಳ್ಳಿ ಮಹಿಳೆ ಆತ್ಮಹತ್ಯೆ
ಇತ್ತೀಚಿಗೆ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ. ಶುಭಾ ಅವರು ಕುವೆಂಪು ವಿಶ್ವ ವಿದ್ಯಾಲಯದ ಮೊಟ್ಟಮೊದಲ ಮಹಿಳಾ ಎನ್’ಎಸ್’ಎಸ್ ಸಂಯೋಜನಾಧಿಕಾರಿಯಾಗಿದ್ದಾರೆ.
ಕುಲಪತಿಗಳಾದ ಡಾ. ಎಸ್. ವೆಂಕಟೇಶ್, ಕುಲಸಚಿವರಾದ ಡಾ. ಸ್ನೇಹಲ್ ಸುಧಾಕರ್ ಲೋಖಂಡೆ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಗೋಪಿನಾಥ್, ಪ್ರಾಚಾರ್ಯರಾದ ಡಾ.ಎಂ.ಕೆ. ವೀಣಾ, ಡಾ. ಸೈಯದ್ ಸನಾವುಲ್ಲಾ, ಡಾ. ಎನ್. ರಾಜೇಶ್ವರಿ ಹಾಗೂ ಎಲ್ಲಾ ಕಾಲೇಜಿನ ಪ್ರಾಚಾರ್ಯರು, ಕಾರ್ಯಕ್ರಮಾಧಿಕಾರಿಗಳು, ವಿದ್ಯಾರ್ಥಿಗಳು, ಆತ್ಮೀಯರು ಡಾ. ಶುಭಾ ಮರವಂತೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವೃತ್ತಿಜೀವನದಲ್ಲಿ ನೂತನ ಜವಾಬ್ದಾರಿ ಅಲಂಕರಿಸುತ್ತಿರುವ ಡಾ. ಶುಭಾ ಮರವಂತೆ ಅವರನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post