ಕಲ್ಪ ಮೀಡಿಯಾ ಹೌಸ್ | ಶೃಂಗೇರಿ |
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠೆಯಲ್ಲಿ Ayodhya Rama Mandira ಶೃಂಗೇರಿ ಮಠದ ಉಭಯ ಶ್ರೀಗಳು ಪಾಲ್ಗೊಳ್ಳುವುದಿಲ್ಲ ಎಂದು ಶ್ರೀಮಠ ಸ್ಪಷ್ಟಪಡಿಸಿದರು.
ಈ ಕುರಿತಂತೆ ಶ್ರೀಮಠ ಅಧಿಕೃತ ವೆಬ್’ಸೈಟ್’ನಲ್ಲಿ ಮಹತ್ವದ ಸ್ಪಷ್ಟೀಕರಣ ನೀಡಿದ್ದು, ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ Shringeri Sharadhapeeta ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳು Shri Bharathitheertha Mahaswamy ಹಾಗೂ ವಿಧುಶೇಖರ ಸ್ವಾಮಿಗಳು Shri Vidhushekara Swamy ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ಆಡಳಿತಾಧಿಕಾರಿ ಗೌರಿಶಂಕರ್ ಅವರು ಶ್ರೀಮಠದ ಅಧಿಕೃತ ಪ್ರತಿನಿಧಿಯಾಗಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

Also read: ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ ವಿಗ್ರಹ: ಹೀಗಿದೆ ನೋಡಿ ಮೊದಲ ಫೋಟೋ
ಆದರೆ, ಗುರುಗಳು ಭಕ್ತವೃಂದಕ್ಕೆ ಎಲ್ಲರೂ ಜನವರಿ 22ರಂದು ರಾಮತಾರಕ ಜಪ ಹಾಗೂ ರಾಮಭುಜಂಗ ಸ್ತೋತ್ರ ಪಠಿಸುವಂತೆ ಕರೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post