ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಮಾಜಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡುವುದು ಸ್ವಾಮಿ ವಿವೇಕಾನಂದರಿಗೆ Swamy Vivekananda ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಿದ್ದಬಸಪ್ಪ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವದಿನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕ್ಯಾನ್ಸರ್ ಜಾಗೃತಿ ಉಪನ್ಯಾಸ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಯನ್ಸ್ ಒಂದು ಸೇವಾಧಾರಿತ ಸಂಸ್ಥೆಯಾಗಿದ್ದು, ತಮ್ಮ ಕಾರ್ಯ ಒತ್ತಡದ ನಡುವೆಯೂ ಕೂಡೂ ಈ ಸಂಸ್ಥೆ ನೂರಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸ್ವಾಮಿ ವಿವೇಕಾನಂದ ಜಯಂತಿಯನ್ನು ಈ ರೀತಿ ರಕ್ತದಾನ ಹಾಗೂ ಆರೋಗ್ಯ ಶಿಬಿರಗಳ ಮೂಲಕ ನಡೆಸುತ್ತಿರುವುದು ವೀರ ಸನ್ಯಾಸಿ ಜಾಗತಿಕ ಆದರ್ಶ ರೂಪಿ ಸ್ವಾಮಿ ವಿವೇಕಾನಂದರಿಗೆ ನಾವು ಸಲ್ಲಿಸುತ್ತಿರುವ ಗೌರವ ಎಂದರು.
ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಲಯನ್ಸ್ ಕ್ಲಬ್’ನಂತೆ ಜನೋಪಯೋಗಿ ಸೇವೆ ಸಲ್ಲಿಸುತ್ತಾ ಹೋದರೆ ಭಾರತವು ಆರೋಗ್ಯಪೂರ್ಣ ಪ್ರಬಲ ರಾಷ್ಟçವಾಗುವುದರಲ್ಲಿ ಸಂಶಯವಿಲ್ಲ. ಆರೋಗ್ಯವೇ ಮಹಾಭಾಗ್ಯ, ರಕ್ತದಾನ ಮಹಾದಾನ ಎಂದು ಲಯನ್ಸ್ ಕ್ಲಬ್ಬನ್ನು ಶ್ಲಾಘಿಸಿದರು.
ಮಾಜಿ ಜಿಲ್ಲಾ ಗವರ್ನರ್ ದಿವಾರಕ ಶೆಟ್ಟಿ ಮಾತನಾಡಿ, ರಾಷ್ಟಿçÃಯ ಯುವದಿನವನ್ನು ರಕ್ತದಾನದ ಮೂಲಕ ಆಚರಿಸುತ್ತಿರುವುದು ಸಂತೋಷ ಮೂಡಿಸಿದೆ. ಪ್ರಪಂಚದಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಾಗದೇ ಇರುವ ಜೀವಾಧಾರ ರಕ್ತವಾಗಿದೆ. ಇಂತಹ ರಕ್ತವನ್ನು ಅರ್ಹರು ನಿಯಮಿತವಾಗಿ ದಾನ ಮಾಡುವುದರಿಂದ ಹಲವಾರು ಮಂದಿಯ ಪ್ರಾಣ ಉಳಿಸಲು ಸಾಧ್ಯ ಎಂದರು.
Also read: ಜ.22ರಂದು ಪ್ರಾಣಪ್ರತಿಷ್ಠೆ ದಿನ ಅಯೋಧ್ಯೆಯಲ್ಲಿ ಹೇಗಿರಲಿದೆ ಹವಾಮಾನ?
ಆಡಳಿತಾಧಿಕಾರಿ ಡಾ.ರಾಕೇಶ್ ಅವರು ವಿವೇಕಾನಂದರ ಕುರಿತಾಗಿ ಉಪನ್ಯಾಸ ನೀಡಿದರು. ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯ ಮೊಹಮದ್ ಇಸ್ಮಾಯಿಲ್ ಶರೀಫ್ ಹಾಗೂ ಭರತ್ ಅವರು ಕ್ಯಾನ್ಸರ್ ತಡೆಗಟ್ಟುವ ಮಾರ್ಗೋಪಾಯಗಳು ಹಾಗೂ ಜೀವನಶೈಲಿಯ ಬಗ್ಗೆ ಪಿಪಿಟಿ ಮೂಲಕ ಜಾಗೃತಿ ಮೂಡಿಸಿ, ಸಂವಾದ ನಡೆಸಿದರು.
ಭದ್ರಾವತಿ ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಮೀನಾ ನರ್ಸಿಂಗ್ ಹೋಂ, ಲಯನ್ಸ್ ರಕ್ತ ನಿಧಿ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯದರ್ಶಿ ಎಂ. ದಿವಾಕರ್ ನಿರೂಪಿಸಿ, ಆಶಾ ಹಾಗೂ ಬಿ.ಎಸ್. ರಾಜೇಶ್ ಸ್ವಾಗತಿಸಿದರು. 50 ಬಾರಿ ರಕ್ತದಾನ ಮಾಡಿರುವ ಪ್ರಾಂತೀಯ ಅಧ್ಯಕ್ಷ ಲಯನ್ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ.ಎಲ್. ರಂಗಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಕ್ತನಿಧಿ ಅಧ್ಯಕ್ಷ ಮೌನೇಶ್ ಹಾಗೂ ರವಿಚಂದ್ರ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು. ಮೀನಾ ನರ್ಸಿಂಗ್ ಹೋಂ ವೈದ್ಯರಾದ ಡಾ. ವರ್ಷಾ ಹಾಗೂ ಹಿತೇಶ್ ಅವರುಗಳಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.
ಖಜಾಂಚಿ ಶ್ರೀನಿವಾಸ್, ಮೋಹನ್, ಲಯನ್ ಭುವನೇಶ್ವರ್, ನಾಗರಾಜ್, ಅಶೋಕ್ ರಾಜಕುಮಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















