ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಭವ್ಯ ರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾನೆಗೊಂಡಿದ್ದು, Rama Mandira Shri Ramalalla Prathishtapane ಕೋಟ್ಯಾಂತರ ಹಿಂದೂಗಳ 500 ವರ್ಷಗಳ ಕನಸು ಇಂದು ನನಸಾಗುವ ಜೊತೆಯಲ್ಲಿ ದೇಶದಾದ್ಯಂತ ಜೈಶ್ರೀರಾಮ್ Jai Shriram ಘೋಷಣೆ ಮುಗಿಲುಮುಟ್ಟಿದೆ.
अयोध्या धाम में श्री राम लला की प्राण-प्रतिष्ठा का अलौकिक क्षण हर किसी को भाव-विभोर करने वाला है। इस दिव्य कार्यक्रम का हिस्सा बनना मेरा परम सौभाग्य है। जय सियाराम! https://t.co/GAuJXuB63A
— Narendra Modi (@narendramodi) January 22, 2024
ಹೌದು… ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರ ಯಜಮಾನಿಕೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಯಶಸ್ವಿಯಾಗಿ ನಡೆದಿದ್ದು, ಈ ಮೂಲಕ ದೇಶದಲ್ಲಿ ರಾಮರಾಜ್ಯ ಸ್ಥಾಪನೆಗೆ ಮೊದಲ ಹೆಜ್ಜೆ ಇರಿಸಲಾಗಿದೆ.
12 ಗಂಟೆ ವೇಳೆಗೆ ರೇಷ್ಮೆ ವಸ್ತ್ರ ಧರಿಸಿ, ತಮ್ಮ ಕೈಯಲ್ಲಿ ರಾಮಲಲ್ಲಾಗಾಗಿ ನೂತನ ವಸ್ತç ಹಾಗೂ ಬೆಳ್ಳಿಯ ಛಾತ್ರಾ ಹಿಡಿದು ಭಕ್ತಿಭಾವದಿಂದ ಮಂದಿರದೊಳಗೆ ನಡೆದು ಬಂದರು.
ಪ್ರಧಾನಿಯವರ ಆಗಮನದ ನಂತರ ಪ್ರಾಣಪ್ರತಿಷ್ಠಾಪನಾ ವಿಧಿವಿಧಾನಗಳು ಆರಂಭವಾದವು. ರಾಮ ಮಂದಿರ ಗರ್ಭಗುಡಿಗೆ ತೆರಳಿದ ಮೋದಿ, ಬೆಳ್ಳಿ ಛಾತ್ರ ಹಾಗೂ ವಸ್ತ್ರ ರಾಮಲಲ್ಲಾಗೆ ಅರ್ಪಿಸಿದ್ದಾರೆ.
ಬಳಿಕ ಪ್ರಾಣಪ್ರತಿಷ್ಠೆ ಪೂಜಾ ವಿಧಿವಿಧಾನಗಳು ಆರಂಭಗೊಂಡಿತು. ಯಜಮಾನನ ಸ್ಥಾನದಲ್ಲಿ ನಿಂತು ಪ್ರಧಾನಿ ಮೋದಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಪೂಜಾ ಕೈಂಕರ್ಯಗಳು ನಡೆದವು.
Also read: ಪ್ರಧಾನಿ ಮೋದಿ ಸ್ವತಃ ತಾವೇ ಚಿತ್ರೀಕರಿಸಿದ ಅಯೋಧ್ಯೆಯ ವೈಮಾನಿಕ ದೃಶ್ಯ ಹೇಗಿದೆ ನೋಡಿ
ರಾಮ ಮಂದಿರ ಗರ್ಭಗುಡಿಯಲ್ಲಿ ಪ್ರತಿಪ್ಠಾಪಿಸಿರುವ ರಾಮ ಲಲ್ಲಾ ವಿಗ್ರಹಕ್ಕೆ ಪ್ರಧಾನಿ ಮೋದಿ ತಮ್ಮ ಅಮೃತ ಹಸ್ತದಿಂದ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ಈ ಮೂಲಕ ಕೋಟ್ಯಂತರ ಹಿಂದೂಗಳ 500 ವರ್ಷದ ಕನಸನ್ನು ಪ್ರಧಾನಿಯವರು ನನಸು ಮಾಡಿದ್ದಾರೆ.
ಈ ವೇಳೆ ಗರ್ಭಗುಡಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್’ಎಸ್’ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ಆಯೋಧ್ಯೆ ಅರ್ಚರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post