ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಡೀ ಪ್ರಪಂಚದಲ್ಲಿ ಕೇಸರಿ ಧ್ವಜ ಹಾರಾಟವಾಗುತ್ತಿದೆ. ವಾಷಿಂಗ್‌ಟನ್‌ನಲ್ಲಿ ಕೂಡ ಸಂಭ್ರಮಾಚರಣೆ ನಡೆದಿದೆ. ಭಾರತೀಯರ ಬಹುವರ್ಷದ ಕನಸು ನನಸಾಗಿದೆ. ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಹಿಂದೂ ಸಂಘಟನೆಗಳು ಮತ್ತು ಭಕ್ತಾಧಿಗಳ ನೆರವಿನಿಂದ ಆಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿ, ರಾಮಮಂದಿರಕ್ಕಾಗಿ ಬಲಿಯಾದ ಕರಸೇವಕರಿಗೆ ಈ ಸಂದರ್ಭದಲ್ಲಿ ಚಿರಶಾಂತಿ ಕೋರುತ್ತೇನೆ. ಮತ್ತು ನಿರ್ಮಾಣಕ್ಕೆ ಕಾರಣರಾದ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಮರಾಜ್ಯ ಎಂದರೆ ಎಲ್ಲರನ್ನು ಪ್ರೀತಿಸುವುದು. ಸೌಹಾರ್ದಯುತವಾಗಿ ನಡೆದು ಎಲ್ಲರೂ ಸುಖಶಾಂತಿಯಿAದ ಬದುಕುವೆದೇ ರಾಮರಾಜ್ಯ ಎಂದು ಅರ್ಥ. ದೇವರು ಕಣ ್ಣಗೆ ಕಾಣುವುದಿಲ್ಲ. ಆದರೆ, ಎಲ್ಲ ಕಡೆಯು ಇರುತ್ತಾನೆ. ರಾಮನ ಜನ್ಮಸ್ಥಾನದಲ್ಲಿ ರಾಮನ ಸುಂದರ ದೇವಾಲಯ ನಿರ್ಮಾಣವಾಗಿ ರಾಮನ ಮೂರ್ತಿ ಇಂದು ಪ್ರತಿಷ್ಠಾಪನೆಗೊಂಡಿದೆ. ಭಾರತೀಯರ ಬಹುವರ್ಷದ ಕನಸು ನೆನಸಾಗಿದೆ. ಶ್ರೀರಾಮನ ಆದರ್ಶ ಪಾಲಿಸುವುದೇ ನಮ್ಮೆಲ್ಲರ ಕರ್ತವ್ಯವಾಗಬೇಕು. ಸಿಹಿ ಹಂಚಿ ಸಂಭ್ರಮಿಸಿದ್ದೇವೆ. ಸಿಹಿ ಎಂದರೆ ಸುಖಶಾಂತಿ ನೆಮ್ಮದಿ ಎಂದು ಅರ್ಥ ಎಂದರು.

ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ರಾಮಮಂದಿರ ಆಗಿದೆ. ಇನ್ನೂ ಮಥುರದಲ್ಲಿ ಕೃಷ್ಣನ ಪ್ರತಿಷ್ಠಾಪನೆ ಆಗಬೇಕು. ದುಃಖವೆಂದರೆ ಕರ್ನಾಟಕ ಸರ್ಕಾರ ಈ ಐತಿಹಾಸಿಕ ಕ್ಷಣವನ್ನು ಕಣ್ಣಲಿ ತುಂಬಿಕೊಳ್ಳಲು ಶಾಲ ಮಕ್ಕಳಿಗೆ ರಜೆ ನೀಡಬೇಕಿತ್ತು. ರಜೆ ನೀಡದೇ ಓರ್ವ ಖಳನಾಯಕನಾಗಿ ಇತಿಹಾಸ ಸೃಷ್ಠಿ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಕೆ.ಇ.ಕಾಂತೇಶ್, ಜಗದೀಶ್, ನಾಗರಾಜ್, ಪ್ರಭು ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post