ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಓಂಕಾರ್ ಮೂವ್ಹೀಸ್ ರವರ ಶ್ರೀಮತಿ ಸುಜಾತ ರಾಜ್‌ಕುಮಾರ್ ಅರ್ಪಿಸುವ ಪುರು?ತ್ತಮ್ ಓಂಕಾರ್‌ಸ್ವಾಮಿಯವರ ನಿರ್ದೇಶನದ ‘ಶಿವಯೋಗಿ ಶ್ರೀಸಿದ್ಧರಾಮೇಶ್ವರ’ ಕನ್ನಡ ಭಕ್ತಿಪ್ರಧಾನ ಚಲಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಮಾಡಲಾಯಿತು.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ 851ನೇ ಜಯಂತೋತ್ಸವದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿಎಂ ಸಿದ್ಧರಾಮಯ್ಯನವರು ಈ ಚಿತ್ರದ ಬಗ್ಗೆ ಶುಭವನ್ನು ಕೋರಿದರು . ಚಿತ್ರದಲ್ಲಿ ನಾಯಕ ನಟರಾಗಿ ಉತ್ತರ ಕರ್ನಾಟಕದ ಬೈಲಹೊಂಗಲ ತಾಲೂಕಿನ ಯುವ ಪ್ರತಿಭೆ ರಾವಣ ಕತ್ತಿಯವರು ಸಿದ್ಧರಾಮೇಶ್ವರನಾಗಿ ಅಭಿನಯಿಸಿದ್ದಾರೆ .
ಸತತವಾಗಿ ನಾಲ್ಕು ತೆಲುಗು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿರುವ ರಾವಣ ಕತ್ತಿ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಸಿದ್ಧರಾಮೇಶ್ವರ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ.
Also read: ಸಂತೃಪ್ತಿದಾಯಕ ಸೇವೆ ಹಿನ್ನೆಲೆ: ಶಿಕ್ಷಕಿ ಶಾಂತ್ ಭಟ್ ಅವರಿಗೆ ಗೌರವ ವಂದನೆ
ಹನ್ನೆರಡನೇ ಶತಮಾನದಲ್ಲಿ ಆಗಿಹೋದ ಶರಣ ಸಿದ್ಧರಾಮೇಶ್ವರರ ಪವಾಡಗಳನ್ನು ಜನಸಾಮಾನ್ಯರಿಗೂ ತಲುಪಿಸಬೇಕೆನ್ನುವ ಉತ್ಕಟತೆಯಿಂದ ಎನ್ ಎಸ್ ರಾಜಕುಮಾರ್ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದ್ದು, ಸಹನಿರ್ಮಾಪಕರಾಗಿ ಸುನಿಲ್‌ಕುಮಾರ್ ಎನ್ನುವವರು ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳು ಹಾಗೂ 4 ವಚನಗಳಿದ್ದು ಚಿತ್ರಕ್ಕೆ ಸಂಗೀತ ಸಂಯೋಜನೆ ರಾಜ್‌ಭಾಸ್ಕರ್ ಮಾಡಿದ್ದಾರೆ. ಛಾಯಾಗ್ರಹಣ ಗೌರಿ ವೆಂಕಟೇಶ್, ಚಿತ್ರದ ಎಡಿಟಿಂಗ್ , ಕಲರ್ ಕರೆಕ್ಷನ್ ಹಾಗೂ ಗ್ರಾಫಿಕ್ಸ್ ಆರ್ ಅನಿಲ್‌ಕುಮಾರ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರದಿದೆ.
ತಾರಾಗಣದಲ್ಲಿ ರಾವಣ ಕತ್ತಿ, ಗಣೇಶ್‌ರಾವ್ ಕೇಸರಕರ್, ನಾಗೇಂದ್ರ ಅರಸು , ಬಸವರಾಜ್ , ಕಾವ್ಯಗೌಡ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರದ ಟೀಸರ್ ರಾವಣರಂಭ ಟಿವ್ಹಿ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು ಅತಿ ಶೀಘ್ರದಲ್ಲಿ ರಾಜ್ಯಾದ್ಯಂತ ಬೆಳ್ಳಿತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದಲ್ಲಿ ಬಹಳಷ್ಟು ಗ್ರಾಫಿಕ್ಸ್‌ನ್ನು ಸಂದರ್ಭಕ್ಕನುಸಾರವಾಗಿ ಬಳಸಲಾಗಿದೆ ಎಂದು ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ತಿಳಿಸಿದ್ದಾರೆ.
ವರದಿ: ಡಾ.ಪ್ರಭು ಗಂಜಿಹಾಳ, ಮೊ: 9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post