ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ ತಾಲೂಕು ಬಿಜೆಪಿ ಅಧ್ಯಕ್ಷರು ಹಾಗೂ ವಿವಿಧ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪಟ್ಟಣದ ಮಂಗಳ ಭವನದಲ್ಲಿ ನಡೆಸಲಾಯಿತು.
ನೂತನ ನಗರ ಬಿಜೆಪಿ ಅಧ್ಯಕ್ಷರಾಗಿ ರಾಘವೇಂದ್ರ ಮಾಜಿ , ಪ್ರಧಾನ ಕಾರ್ಯದರ್ಶಿ ಯಾಗಿ ಮಂಜುನಾಥ ಸಿಂಗ್, ಯೋಗೀಶ್ ಮಡ್ಡಿ,
ತಾಲೂಕ್ ಯುವ ಮೋರ್ಚಾ ವೀರಣ್ಣಗೌಡ ಜಿಬಿ, ಪ್ರಧಾನ ಕಾರ್ಯದರ್ಶಿಯಾಗಿ ಲೋಹಿತ್, ನಿರಂಜನ್,
ಹಾಗೂ ವಿವಿಧ ಘಟಕಗಳಿಗೆ ಶಕ್ತಿ ಕೇಂದ್ರಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂದರ್ಭದಲ್ಲಿ ಸಂಸದ ಬಿ. ವೈ. ರಾಘವೇಂದ್ರ, MP Raghavendra ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ.ಡಿ. ಮೇಘರಾಜ್, ಬಿಜೆಪಿ ಮುಖಂಡ ಡಾ. ಧನಂಜಯ ಸರ್ಜಿ, Dr. Dhananjaya Sarji ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹಾರತಾಳು ಹಾಲಪ್ಪ, ತಾಲೂಕ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಕೆಎಸ್ ಗುರುಮೂರ್ತಿ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















