ಕಲ್ಪ ಮೀಡಿಯಾ ಹೌಸ್ | ಶಿರಸಿ |
ತನ್ನ ಮುಪ್ಪಿನ ಜೀವನದಲ್ಲೂ ಕೂಡ ಚಿರ ಯುವಕರನ್ನು ನಾಚಿಸುವಂತೆ ಎರಡು ಬಾವಿ ತೋಡಿ ಸುದ್ದಿಯಾಗಿದ್ದ ಮಹಿಳೆ ಇದೀಗ ಮತ್ತೊಂದು ಮಹತ್ತರ ಸಾಧನೆಗೆ ಮುಂದಾಗಿದ್ದಾರೆ. ಅಂಗನವಾಡಿ ಮಕ್ಕಳಿಗೆ ನೀರಿನ ಕೊರತೆ ನೀಗಿಸುವುದಕ್ಕೆ ಸ್ವತಃ ತಾನೇ ಬಾವಿ ತೋಡಲು ಆರಂಭಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಒಬ್ಬರೇ ಬಾವಿ ತೋಡುವ ಮೂಲಕ ಬೆರಗು ಮೂಡಿಸಿದ್ದ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಹಿಳೆಯೊಬ್ಬರು ಈ ಸಾಹಸಕ್ಕೆ ಮುಂದಾಗಿದ್ದಾರೆ. ಇಲ್ಲಿಯ ಗಣೇಶನಗರದ ಗೌರಿ ಸಿ. ನಾಯ್ಕ ಇಂಥ ಸಾಹಸಕ್ಕೆ ಮುಂದಾದ ಮಹಿಳೆ.

Also read: ಫೆ.26: ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ವಾರ್ಷಿಕೋತ್ಸವ | ವಿಭಿನ್ನ ಕಾರ್ಯಕ್ರಮ ಆಯೋಜನೆ
ನಗರದ ಸಮೀಪವಿದ್ದರೂ ಗಣೇಶನಗರ ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರದೇಶ. ಇಲ್ಲಿ ಬೇಸಿಗೆಯಲ್ಲಿ ನೀರಿನ ಬವಣೆ ತೀರಾ ಎದುರಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆಯಾದರೂ ಸ್ಥಳೀಯವಾಗಿ ನೀರಿನ ಮೂಲ ಸಿಗುತ್ತಿಲ್ಲ. ಹೀಗಾಗಿ ಬೇಸಿಗೆ ಬಂತೆಂದರೆ ನೀರಿನ ತುಟಾಗ್ರತೆ ಶುರುವಾಗುತ್ತದೆ. ಸಾಕಷ್ಟು ಬಾವಿ, ಬೊರ್ವೆಲ್’ಗಳಲ್ಲಿ ನೀರಿನ ಲಭ್ಯತೆಯಿಲ್ಲದೇ
ಗಣೇಶನಗರದ ಅಂಗನವಾಡಿ ಕೇಂದ್ರ-6ರಲ್ಲಿ ಸುಮಾರು 15 ಪುಟಾಣಿ ಮಕ್ಕಳು ಇದ್ದಾರೆ. ಹುತ್ಗಾರ ಗ್ರಾಮ ಪಂಚಾಯಿತಿಯಿAದ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಆದರೆ ಕುಡಿಯುವುದಕ್ಕೆ ಹತ್ತಿರದ ಬಾವಿಯಿಂದ ನಿತ್ಯ ನೀರು ಹೊತ್ತು ತರಬೇಕಾಗುತ್ತದೆ. ಇದನ್ನು ಗಮನಿಸಿದ್ದ ಗೌರಿ ನಾಯ್ಕ ಕಳೆದ ವರ್ಷದಿಂದ ಅವಧಿಯಿಂದ ಅಂಗನವಾಡಿ ಆವಾರದಲ್ಲಿ ಬಾವಿ ತೋಡುವುದಾಗಿ ಹೇಳುತ್ತಾ ಬಂದಿದ್ದರು. ಇದೀಗ ಅವರೇ ಸ್ವಯಂ ಆಗಿ ಬಾವಿ ತೋಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
-ಜ್ಯೋತಿ ನಾಯ್ಕ. ಅಂಗನವಾಡಿ ಶಿಕ್ಷಕಿಇದು ನಾನು ತೋಡುತ್ತಿರುವ ಮೂರನೇ ಬಾವಿ. ಇದರಿಂದ ಅಂಗನವಾಡಿ ಮಕ್ಕಳಿಗಷ್ಟೇ ಅಲ್ಲದೇ ಸುತ್ತಮುತ್ತಲಿನ ಜನರಿಗೂ ನೀರಿನ ಉಪಯೋಗ ಆಗಬೇಕು ಎಂಬುದು ನನ್ನ ಅಪೇಕ್ಷೆ.
-ಗೌರಿ ನಾಯ್ಕ, ಬಾವಿ ತೋಡುತ್ತಿರುವ ಮಹಿಳೆ
ತೊಂದರೆಯಾಗಿದೆ. ಇಂತಹ ಪ್ರದೇಶದಲ್ಲಿ ಚಿರೆ ಮಣ್ಣನ್ನು ಅಗೆದು ಸುಮಾರು 4 ಅಡಿ ಸುತ್ತಳತೆಯ ಬಾವಿ ತೋಡಿ ನೀರು ಉಕ್ಕಿಸುವ ಪ್ರಯತ್ನಕ್ಕೆ ಮಹಿಳೆ ಮುಂದಾಗಿರುವುದು ಗಮನಸೆಳೆಯುತ್ತಿದೆ. ದೇವಲೋಕದಿಂದ ಭೂಮಿಗೆ ಗಂಗೆಯನ್ನು ತಂದ ಭಗೀರಥನ ಪ್ರಯತ್ನ ನೆನೆಪಿಸುವಂತಿದೆ ಈ ಶ್ರಮಜೀವಿ ಮಹಿಳೆಯ ಪರಿಶ್ರಮದ ಕಾರ್ಯ.

ಗಂಗೆ ತರಿಸಿದ ಗೌರಿ
ಗೌರಿ ಸಿ. ನಾಯ್ಕ ನೀರಿನ ಕೊರತೆ ನೀಗಿಸಬೇಕು ಎಂಬ ಕಾರಣಕ್ಕೆ ತನ್ನ ಮನೆಯ ಹಿಂಬದಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ಒಬ್ಬರೇ ಸುಮಾರು 65 ಪೂಟ್ ಆಳದ ಬಾವಿ ತೋಡಿದ್ದಾರೆ. ಅದರಂತೆ ಕಳೆದ ನಾಲ್ಕು ವರ್ಷಗಳ ಹಿಂದೆ ಮನೆಯ ಹಿಂಬದಿಯಲ್ಲಿ ಸುಮಾರು 45 ಪೂಟ್ ಆಳದ ಇನ್ನೊಂದು ಬಾವಿ ತೋಡಿದ್ದರು. ಈಗ ಇಲ್ಲಿಯ ಅಂಗನವಾಡಿಯ ನೀರಿನ ತೊಂದರೆ ನೀಗಿಸಿಲು ಸ್ವ ಆಸಕ್ತಿಯಿಂದ ಇನ್ನೊಂದು ಬಾವಿ ತೆಗೆಯುವ ಸಾಹಸಕ್ಕೆ ಮುಂದಾಗಿದ್ದಾರೆ. ಇದು ಬಾವಿ ತೋಡುವುದರಲ್ಲಿ ಹ್ಯಾಟ್ರಿಕ್ ಸಾಧನೆಯಂತಾಗುತ್ತಿದ್ದು, ಗಂಗೆಯನ್ನ ತರಿಸಿದ ಗೌರಿಯಾಗಿದ್ದಾರೆ.
ವಿಶೇಷ ವರದಿ: ಸೀಮಾ ಭಾಸ್ಕರ್ ಗೆಂಡ್ಲ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post