ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತ್ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ Rahul Gandhi ದಿನಕ್ಕೊಂದು ಹೊಸ ಹೊಸ ಕಥೆ ಹೇಳುತ್ತಿದ್ದಾರೆ.
ಇದೀಗ ಅದಾನಿ, ಅಂಬಾನಿ ಹಾಗೂ ಡ್ರೋಣ್ Adani, Ambani, Drone ಕಥೆಯೊಂದನ್ನು ರಾಹುಲ್ ಹೇಳಿದ್ದು… ವೈರಲ್ ಆಗಿದೆ.
ಭಾರತ್ ನ್ಯಾಯ ಯಾತ್ರೆಯಲ್ಲಿ Bharat Nyaya Yatra ಮಾತನಾಡಿದ ಅವರು, ನೀವು ಡ್ರೋಣ್ ನೋಡಿದ್ದೀರಾ? ಡ್ರೋಣ್ ಕ್ಯಾಮೆರಾ ಆದಿವಾಸಿಗಳ ಜಮೀನು ಹಾಗೂ ಆಸ್ತಿಗಳ ಮೇಲೆ ಹಾರಿ ಬರುತ್ತದೆ. ಹಾರಿ ಬಂದು ನಿಮ್ಮ ಜಮೀನು ಹಾಗೂ ಆಸ್ತಿಗಳನ್ನು ವೀಡಿಯೋ ಸರ್ವೆ ಮಾಡಿಕೊಂಡು ಹೋಗುತ್ತದೆ. ಆನಂತರ ಎನ್’ಜಿಒಗಳು ಬಂದು ಒಂದಷ್ಟು ಹಣ ನೀಡಿ ನಿಮ್ಮ ಆಸ್ತಿಯನ್ನು ಕಬಳಿಸುತ್ತವೆ ಎಂದರು.
Also read: ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿಯನ್ನು ಗುಂಡಿಟ್ಟು ಕೊಲ್ಲಬೇಕು: ಈಶ್ವರಪ್ಪ ಆಕ್ರೋಶ
ಹೀಗೆ ಎನ್’ಜಿಒಗಳು ಕಬಳಿಸುವ ಆಸ್ತಿ ಅದಾನಿ ಹಾಗೂ ಅಂಬಾನಿ ಅವರುಗಳಿಗೆ ಸೇರುತ್ತವೆ. ಈ ಮೂಲಕ ನಿಮ್ಮ ಆಸ್ತಿಗಳು ಅವರ ಪಾಲಾಗುತ್ತವೆ. ನೀವುಗಳು ತುಂಬಾ ಎಚ್ಚರಿಕೆಯಿಂದರಬೇಕು ಎಂದರು.
ರಾಹುಲ್ ಗಾಂಧಿ ಹೇಳಿದ ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















