ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಾಕಿರುವ ಪಿಟ್ ಬುಲ್ ನಾಯಿಯೊಂದು ದಾಳಿ Pit bull dog attack ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಉದ್ಯಾನ ನಗರಿಯಲ್ಲಿ ನಡೆದಿದೆ.
ವರ್ತೂರಿನ ಬೆಳಗೆರೆ ನಿವಾಸಿ ಚಂದ್ರಶೇಖರ್(49) ಎನ್ನುವವರ ಮೇಲೆ ಸಾಕಿರುವ ಎರಡು ಪಿಟ್ ಬುಲ್ ನಾಯಿಗಳು ದಾಳಿ ನಡೆಸಿ ಸುಮಾರು 20ಕ್ಕೂ ಅಧಿಕ ಬಾರಿ ಕಚ್ಚಿವೆ.
ಉದ್ಯಮಿಯಾಗಿರುವ ಚಂದ್ರಶೇಖರ್ ಅವರು ತಮ್ಮ ಮನೆಯ ಪಕ್ಕದಲ್ಲಿನ ತೋಟ ಹಾಗೂ ಮನೆಯನ್ನು ಬಾಡಿಗೆಗೆ ನೀಡಿದ್ದು, ಬಾಡಿಗೆಗೆ ಇರುವವರು ಪಿಟ್ ಬುಲ್ ನಾಯಿ ಸಾಕಿದ್ದಾರೆ. ಈ ನಡುವೆ ಪಿಟ್ ಬುಲ್ ನಾಯಿಗಳನ್ನು ಸಾಕುವುದು ಸರಿಯಲ್ಲ, ಅಪಾಯದ ಸಾಧ್ಯತೆ ಹೆಚ್ಚು ಎಂದು ಬಾಡಿಗೆದಾರರಿಗೆ ಸಹ ಹೇಳಿದ್ದರು.
Also read: ರಾಣೆಬೆನ್ನೂರು | ಸರ್ವ ಧರ್ಮ ಸಮಾನತೆ ಸಾರಿದ ಈಶ್ವರಪ್ಪ, ಕಾಂತೇಶ್
ಚಂದ್ರಶೇಖರ್ ಅವರು ತಮ್ಮ ತೋಟದಲ್ಲಿ ತೆಂಗಿನ ಮರದಲ್ಲಿ ಕಾಯಿಗಳನ್ನು ಕೀಳಿಸಲು ಕೆಲಸಗಾರರಿಗೆ ಸೂಚನೆ ನೀಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ಪಿಟ್ ಬುಲ್ ನಾಯಿಗಳು ಬಂದು ದಾಳಿ ಮಾಡಿ ಕಚ್ಚಿವೆ.
ಇದರಿಂದ ಚಂದ್ರಶೇಖರ್ ಕೂಗಿಕೊಂಡರೂ ನಾಯಿ ಮಾಲೀಕರು ಬಂದಿಲ್ಲ. ಕಾಯಿ ಕೀಳುತ್ತಿದ್ದ ಕೆಲಸಗಾರರು ಕೆಳಕ್ಕೆ ಇಳಿಯುವ ವೇಳೆ ಚಂದ್ರಶೇಖರ್ ಕೋಲು ಹಿಡಿದುಕೊಂಡು ಬಂದಿದ್ದಾರೆ. ಈ ವೇಳೆ ನಾಯಿ ಮಾಲೀಕರು ಓಡಿಬಂದು ಅವುಗಳನ್ನು ಕಟ್ಟಿ ಹಾಕಿದ್ದಾರೆ. ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಗುಣಮುಖರಾಗಲು ಕನಿಷ್ಠ 5-6 ತಿಂಗಳ ಅವಶ್ಯತೆಯಿದೆ ಎಂದು ತಿಳಿದುಬಂದಿದೆ.
ನಾಯಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















