ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಆಪ್ತ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಉಷಾ ಅವರ ತಂದೆ ಎಲ್ಲೋಜಿರಾವ್ (70) ಅವರು ಇಂದು ವಿಧಿವಶರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಎಲ್ಲೋಜಿರಾವ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಎಲ್ಲೋಜಿ ರಾವ್ ಅವರ ಪುತ್ರಿ ಉಷಾ ಅವರು ಶಾಸಕರ ಆಪ್ತ ಕಚೇರಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಉತ್ತಮ ಹೆಸರು ಗಳಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಕೋಡಹಳ್ಳಿಯಲ್ಲಿ ನಾಳೆ ನಡೆಯಲಿದೆ.
ಶಾಸಕರ ಕಂಬನಿ
ಮೃತ ಎಲ್ಲೋಜಿ ರಾವ್ ಅವರು ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದು, ಅವರ ನಿಧನ ಅತ್ಯಂತ ದುಃಖ ತರಿಸಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಕಂಬನಿ ಮಿಡಿದಿದ್ದಾರೆ.
Also read: ಉತ್ತರಪ್ರದೇಶದಲ್ಲಿ ಎಸ್ಮಾ ಜಾರಿ | ಆರು ತಿಂಗಳು ಮುಷ್ಕರ ನಿಷೇಧಿಸಿದ ಯೋಗಿ ಸರ್ಕಾರ
ಇವರ ಕುಟುಂಬಸ್ಥರಿಗೆ ದುಃಖ ತಡೆಯುವ ಶಕ್ತಿ ನೀಡಲಿ, ಮೃತ ಆತ್ಮಕ್ಕೆ ಸದ್ಗರಿ ದೊರೆಯಲಿ ಎಂದು ಶಾಸಕರು ಪ್ರಾರ್ಥಿಸಿದ್ದಾರೆ. ಪ್ರಮುಖರಾದ ಬಿ.ಕೆ. ಮೋಹನ್, ಶಾಸಕರ ಪುತ್ರರಾದ ಬಸವೇಶ್, ಗಣೇಶ್ ಹಾಗೂ ತಾಲೂಕು ಕಾಂಗ್ರೆಸ್ ಮುಖಂಡರು ಎಲ್ಲೋಜಿರಾವ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post