ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿರ್ಣಾಯಕ ಘಟ್ಟದ ಪರೀಕ್ಷೆಗಳ ಸಂದರ್ಭದಲ್ಲಿ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿಸಿ ಮುನ್ನಡೆಸಬೇಕು ಎಂದು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಯಾನಂದ ಸಾಗರ್ ಪಾಲಕರಿಗೆ ಸಲಹೆ ನೀಡಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ATNCC ಚಂದನ ಸಭಾಂಗಣದಲ್ಲಿ ರೇಡಿಯೋ ಶಿವಮೊಗ್ಗ, ಪರಿಸರ ಅಧ್ಯಯನ ಕೇಂದ್ರ, ರಾಷ್ಟ್ರೀಯ ಶಿಕ್ಷಣ ಸಮಿತಿ NES ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜು Subbaiah Medical College ಆಸ್ಪತ್ರೆ ಸಹಯೋಗದಲ್ಲಿ ಹತ್ತನೆಯ ತರಗತಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಕರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಾಗಾರ ದಲ್ಲಿ ಮಾತನಾಡಿದ ಅವರು, ಪರೀಕ್ಷಾ ಸಮಯದಲ್ಲಿ ಪಾಲಕರು ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ಡಾ. ದಯಾನಂದ ಸಾಗರ್ ಜೊತೆಗೆ ನಡೆದ ಸಂವಾದದಲ್ಲಿ ಮಕ್ಕಳಲ್ಲಿನ ಒತ್ತಡಗಳನ್ನು ನಿರ್ವಹಿಸುವ ಬಗೆಯನ್ನು ಪಾಲಕರು ತಿಳಿದುಕೊಂಡರು. ಪಾಲಕರು ಹಾಗೂ ಮಕ್ಕಳ ನಡುವೆ ಬಾಂಧವ್ಯ ಹೇಗಿರಬೇಕು ಎಂದು ಸಂಕ್ಷಿಪ್ತವಾಗಿ ವಿವರಿಸಿದರು.
Also read: ವಿಮಾನ ತುರ್ತು ಭೂಸ್ಪರ್ಶ | ನಟ ಧ್ರವ ಸರ್ಜಾ ಸೇರಿ ಮಾರ್ಟಿನ್ ಚಿತ್ರತಂಡ ಕೂದಲೆಳೆ ಅಂತರದಲ್ಲಿ ಪಾರು
ಆಹಾರ ತಜ್ಞರಾದ ನಿರಾಲಿ ಹಾಗೂ ಅರ್ಪಿತಾ ಶೆಟ್ಟಿ ಮಾತನಾಡಿ, ಪರೀಕ್ಷಾ ಸಮಯದಲ್ಲಿ ಆಹಾರ ಹೇಗಿರಬೇಕು, ಪೌಷ್ಟಿಕಾಂಶಯುಕ್ತ ಆಹಾರಗಳೆಂದರೆ ಯಾವುವು, ಅದನ್ನು ಯಾವ ಸಮಯದಲ್ಲಿ, ಯಾವ ಪ್ರಮಾಣದಲ್ಲಿ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಸಂವಾದ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಅನೇಕ ಸಂದೇಹ, ಗೊಂದಲಗಳಿಗೆ ಉತ್ತರ ಕಂಡುಕೊಂಡರು. ಈ ಸಂದರ್ಭದಲ್ಲಿಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ನಾಗರಾಜ್, ಕಾಲೇಜಿನ ಉಪ ಪ್ರಾಂಶುಪಾಲ ಜಗದೀಶ್, ರೇಡಿಯೋ ಶಿವಮೊಗ್ಗದ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ, ಕಾರ್ಯಕ್ರಮ ಸಂಯೋಜಕ ಅಜೇಯ ಸಿಂಹ, ಆರ್ ಜೆ ಗಳಾದ ಮಹಾಲಕ್ಷ್ಮೀ, ರಕ್ಷಿತಾ ಹೊಳ್ಳ, ಅಶ್ವಿನಿ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















