ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ Shri Raghavendra Swamy Mutt ಅದ್ದೂರಿಯಾಗಿ ಮದ್ವ ನವಮಿಯನ್ನು ಆಚರಿಸಲಾಯಿತು.
ಮದ್ವ ನವಮಿ Madhva Navami ಹಿನ್ನೆಲೆಯಲ್ಲಿ ಆಂಜನೇಯ, ವಾದಿರಾಜರು ಹಾಗೂ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ ನಡೆಸಲಾಯಿತು. ಆನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದವರೆಗೂ ರಥೋತ್ಸವ ನಡೆಸಲಾಯಿತು.
Also read: ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಆತ್ಮವಿಶ್ವಾಸ ನೀಡಿ ಮುನ್ನಡೆಸಿ: ಡಾ. ದಯಾನಂದ ಸಾಗರ್
ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಮುರುಳಿಧರ್ ತಂತ್ರಿ, ಉಪಾಧ್ಯಕ್ಷ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ್ ಹಾಗೂ ನಿರಂಜನಾಚಾರ್ಯ ಮತ್ತು ಮಾಧುರಾವ್ ಕಾರ್ಯಕ್ರಮಕ್ಕಾಗಿ ಶ್ರಮಿಸಿದರು. ವೇ.ಬ್ರ. ಗೋಪಾಲಾಚಾರ್, ಜಯತೀರ್ಥ, ಸುಧೀಂದ್ರ ಹಾಗೂ ಗುರುರಾಜ, ವಿದ್ಯಾನಂದ ನಾಯಕ್ ಸೇರಿ ಹಲವರು ನೇತೃತ್ವ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















