ಕಲ್ಪ ಮೀಡಿಯಾ ಹೌಸ್ | ಜೈಪುರ |
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ Sonia Gandhi ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜಸ್ಥಾನದಿಂದ ಮೂರು ಸ್ಥಾನಗಳಲ್ಲಿ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಸೋನಿಯಾಗಾಂಧಿ ಅವರನ್ನೂ ಸಹ ಆರಿಸಲಾಗಿದೆ.
ಈ ಕುರಿತಂತೆ ರಾಜಸ್ಥಾನ ವಿಧಾನಸಭೆಯ ಪ್ರಧಾನಿ ಕಾರ್ಯದರ್ಶಿ ಮತ್ತು ರಾಜ್ಯಸಭೆಯ ಚುನಾವಣಾಧಿಕಾರಿ ಮಹಾವೀರ ಪ್ರಸಾದ್ ಶರ್ಮಾ ಅವರು ಘೋಷಣೆ ಮಾಡಿದ್ದಾರೆ.
Also read: ಸಿದ್ದರಾಮಯ್ಯನವರದ್ದು ಸುಳ್ಳಿನ ಆರ್ಥಿಕತೆ, ಬೀದಿಯಲ್ಲಿ ನಿಂತು ಸಂತೆ ಭಾಷಣ: ಆರ್. ಅಶೋಕ ಟೀಕೆ
ರಾಜಸ್ಥಾನದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾದ ಚುನ್ನಿ ಲಾಲ್ ಗರಾಸಿಯಾ ಮತ್ತು ಮದನ್ ರಾಥೋಡ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮೂವರೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಕಳೆದ ಬಾರಿ ಕಾಂಗ್ರೆಸ್ ರಾಜಸ್ಥಾನದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಕಳುಹಿಸಿತ್ತು. ಸಿಂಗ್ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ, ಸೋನಿಯಾ ಗಾಂಧಿ ಅವರನ್ನು ಈಗ ರಾಜಸ್ಥಾನವನ್ನು ಪಕ್ಷಕ್ಕೆ ಸುರಕ್ಷಿತವೆಂದು ಪರಿಗಣಿಸಿ ಇಲ್ಲಿಂದ ರಾಜ್ಯಸಭೆಗೆ ಕಳುಹಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post