ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊರವಲಯದಲ್ಲಿ ರಾತ್ರಿ ವೇಳೆ ದಾರಿಹೋಕರನ್ನು ತಡೆದು ದರೋಡೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ತುಂಗಾ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಶಿಕಾರಿಪುರ ಮೂಲದ ಮೊಹಮದ್ ಮುಸೇಬ್ ಹಾಗೂ ಶಿವಮೊಗ್ಗದ ತೌಸಿಫ್ ಎಂದು ಗುರುತಿಸಲಾಗಿದೆ.
ಸಾಗರ ರಸ್ತೆಯ ಪುರದಾಳು ರಸ್ತೆಯಲ್ಲಿ ಐವರು ದುಷ್ಕರ್ಮಿಗಳು ದರೋಡೆಗೆ ಹೊಂಚು ಹಾಕಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದೆ. ಈ ವೇಳೆ ಇಬ್ಬರನ್ನು ಬಂಧಿಸಲಾಗಿದ್ದು, ಮೂವರು ಪರಾರಿಯಾಗಿದ್ದಾರೆ.
Also read: ವೃದ್ಧೆಯ ಕೈ, ಕಾಲು ಕತ್ತರಿಸಿ ಭೀಕರ ಹತ್ಯೆ | 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ರಾತ್ರಿ 11.30ರ ವೇಳೆಗೆ ಪೊಲೀಸರ ಈ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳಿಂದ ಚಾಕು, ಮಚ್ಚು ಹಾಗೂ ಖಾರದಪುಡಿಯನ್ನು ವಶಕ್ಕೆ ಪಡೆಯಲಿದೆ. ಕಾರ್ಯಾಚರಣೆಯಲ್ಲಿ ಪಿಎಸ್’ಐ ನಾಗರಾಜ್, ಸಿಬ್ಬಂದಿಗಳಾದ ನಾಗಪ್ಪ, ಹರೀಶ್ ನಾಯ್ಕ, ಹರೀಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















