ಕಲ್ಪ ಮೀಡಿಯಾ ಹೌಸ್ | ಹೆಬ್ರಿ |
ಪ್ರವಾಸಕ್ಕೆಂದು ತೆರಳಿದ್ದ ಯುವಕರ ತಂಡದ ಪೈಕಿ ಶಿವಮೊಗ್ಗದ ವ್ಯಕ್ತಿ ಸೇರಿ ಇಬ್ಬರು ಸೋಮೇಶ್ವರ ಸಮೀಪದ ಸೀತಾ ನದಿಯಲ್ಲಿ Seetha river in Hebri ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಶಿವಮೊಗ್ಗದ ಶೈನು ಡೇನಿಯಲ್ ಹಾಗೂ ಕೊಪ್ಪದ ವೈದ್ಯ ಡಾ. ದೀಪಕ್ ಕೊಪ್ಪ ಎಂದು ಗುರುತಿಸಲಾಗಿದೆ.
ಹೆಬ್ರಿಯ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಬಳಿಯ ಸೀತಾ ನದಿಯಲ್ಲಿ ಘಟನೆ ನಡೆದಿದ್ದು, ಈಜಲು ಬಾರದಿದ್ದರೂ ನದಿಗೆ ಇಳಿದಿದ್ದು ಘಟನೆ ಕಾರಣ ಎಂದು ಹೇಳಲಾಗಿದೆ.
Also read: ಶಿವಮೊಗ್ಗ | ದಾರಿಹೋಕರ ದರೋಡೆಗೆ ಸಂಚು | ಇಬ್ಬರು ಆರೋಪಿಗಳು ಅಂದರ್
ಮೃತ ಇಬ್ಬರು ಹಾಗೂ ಇನ್ನಿಬ್ಬರು ಸ್ನೇಹಿತರ ಪ್ರವಾಸಕ್ಕೆಂದು ತೆರಳಿದ್ದರು. ಹೆಬ್ರಿಯಲ್ಲಿ ಊಟ ಮುಗಿಕೊಂಡು ಸೋಮೇಶ್ವರದ ಬಳಿಯಲ್ಲಿನ ಸೀತಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು.
ಈ ವೇಳೆ ನೀರಿಗೆ ಇಳಿದ ಶೈನು ಅವರು ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿ ರಕ್ಷಿಸಲು ದೀಪಕ್ ಅವರು ನೀರಿಗೆ ಹಾರಿದ್ದು, ಅವರೂ ಸಹ ಮುಳಗಿದ್ದಾರೆ. ಈ ವೇಳೆ ಇಬ್ಬರನ್ನೂ ಸಹ ರಕ್ಷಿಸಲು ಸ್ನೇಹಿತ ವಿನ್ಸೆಂಟ್ ಸಹ ನೀರಿಗೆ ಹಾರಿದ್ದಾರೆ. ಅವರೂ ಸಹ ಮುಳುಗುತ್ತಿದ್ದು, ಈ ವೇಳೆ ಅಲ್ಲಿಯೇ ಇದ್ದ ಮರದ ಕೊಂಬೆ ಹಿಡಿದುಕೊಂಡು ಜೀವ ರಕ್ಷಿಸಿಕೊಂಡಿದ್ದಾರೆ.
ಮಾಹಿತಿಯ ಪ್ರಕಾರ ಮೂವರಿಗೂ ಸಹ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post