ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಿಷೇಧಿತ ಸಿಮಿ ಸಂಘಟನೆಯ ನಿಯತಕಾಲಿಕೆ ಸಂಪಾದಕನಾಗಿದ್ದ, 22 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಉಗ್ರ ಹನೀಫ್ ಶೇಖ್(47)ನನ್ನು Terrorist Hanif Sheik ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಹನೀಫ್ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ನಿಷೇಧಿತ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ ಉಗ್ರ ಸಿಮಿ ಮೂವ್ಮೆಂಟ್’ನ ನಿಕಯತಕಾಲಿಕೆಯಲ್ಲಿ ಸಂಪಾದಕ ಸಹ ಆಗಿದ್ದ. ಇದರಲ್ಲಿ ಹನೀಫ್ ಹುದೈ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ. ಈ ಹೆಸರೇ ಈತನನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿದು ಬಂದಿದೆ. ಈತನನ್ನು 2002ರಲ್ಲಿ ಉಗ್ರ ಎಂದು ಘೋಷಿಸಲಾಗಿತ್ತು.
Also read: ಹೆಬ್ರಿ | ಸೀತಾನದಿಯಲ್ಲಿ ಮುಳುಗಿ ಶಿವಮೊಗ್ಗದ ವ್ಯಕ್ತಿ ಸೇರಿ ಇಬ್ಬರ ದುರ್ಮರಣ
ಆರೋಪಿ ವಿರುದ್ಧ 2001 ರಲ್ಲಿ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಆರೋಪ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇಷ್ಟಾದರೂ ಆತನ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಪೊಲೀಸರಿಗೆ ಏಕೈಕ ಸುಳಿವು ಎಂದರೆ ಪತ್ರಿಕೆಯಲ್ಲಿ ಮುದ್ರಿಸಲಾದ `ಹನೀಫ್ ಹುದೈ’ ಎಂಬ ಹೆಸರು ಎಂದು ತಿಳಿದು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post