ಕಲ್ಪ ಮೀಡಿಯಾ ಹೌಸ್ | ಮುಂಬೈ |
ಬಾಲಿವುಡ್ ಚಿತ್ರರಂಗ ಹೆಸರಾಂತ ಗಾಯಕ, ಗಜಲ್ ಮಾಂತ್ರಿಕ ಪಂಕಜ್ ಉದಾಸ್ (73) Pankaj Udhas ಇಂದು ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

Also read: ಭೀಕರ ಸರಣಿ ರಸ್ತೆ ಅಪಘಾತ | ಒಂಬತ್ತು ಮಂದಿ ದಾರುಣ ಸಾವು
ಧ್ವನಿ ಮತ್ತು ಅವನ ಸಂಗೀತದ ಮೂಲಕ ಆಳವಾದ ಭಾವನೆಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದ್ದ ಅವರು, 1980 ರಲ್ಲಿ ಅವರ ಗಜಲ್ ಆಲ್ಬಂ ಆಹತ್ ಬಿಡುಗಡೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಗಜಲ್ ಗಾಯನಕ್ಕೆ ಅವರ ಅತ್ಯುತ್ತಮ ಕೊಡುಗೆ ಮತ್ತು ಕ್ಯಾನ್ಸರ್ ರೋಗಿಗಳು, ಥಲಸ್ಸೆಮಿಕ್ ಮಕ್ಕಳ ಕಡೆಗೆ ಅವರ ಪರೋಪಕಾರಿ ಪ್ರಯತ್ನಗಳಿಗಾಗಿ ಅವರಿಗೆ 2006 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಉದಾಸ್ ನಿಧನಕ್ಕೆ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post