ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಲವು ದಿನಗಳಿಂದ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿರುವ ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ S T Somashekar ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡುವ ಮೂಲಕ ಕಮಲ ಪಕ್ಷಕ್ಕೆ ಶಾಕ್ ನೀಡಿದ್ದಾರೆ.
ಬಿಜೆಪಿ ಚುನಾವಣಾ ಏಜೆಂಟ್ ಒಬ್ಬರು ಅಡ್ಡಮತದಾನವನ್ನು ಖಚಿತಪಡಿಸಿದ್ದಾರೆ.
ಕೆಲವು ದಿನಗಳಿಂದ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿರುವ ಸೋಮಶೇಖರ್, ಕಾಂಗ್ರೆಸ್ ನಾಯಕರ ಜೊತೆಗೆ ಕಾಣಿಸಿಕೊಂಡು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದರು.
Also read: ಲೋಕಸಭಾ ಚುನಾವಣೆ | ಚೆಕ್’ಪೋಸ್ಟ್ ಸ್ಥಳ, ಮತಗಟ್ಟೆಗಳಿಗೆ ಡಿಸಿ, ಎಸ್’ಪಿ ಭೇಟಿ
ಮತದಾನಕ್ಕೂ ಮೊದಲು ಮಾತನಾಡಿದ್ದ ಅವರು, 11 ವರ್ಷಗಳಿಂದ ಎಲ್ಲರಿಗೂ ಮತ ಹಾಕಿದ್ದೇನೆ. ಆದರೆ, ರಾಜ್ಯಸಭೆಗೆ ಆಯ್ಕೆಯಾದವರು ಒಂದು ರೂಪಾಯಿ ಸಹ ಅನುದಾನ ನೀಡಿಲ್ಲ. ಹೀಗಾಗಿ, ಈ ಬಾರಿ ಅಡ್ಡಮತದಾನ ಮಾಡುತ್ತೇನೆ ಎಂದಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post