ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಗೋಪಾಲಗೌಡ ಬಡಾವಣೆಯ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡಿರುವ ಘಟನೆ ನಡೆದಿದ್ದು, ಮನೆಯ ಒಳಭಾಗ ಸಂಪೂರ್ಣ ಜಖಮ್ ಆಗಿದೆ ಎಂದು ತಿಳಿದುಬಂದಿದೆ.
Also read: ಬಳ್ಳಾರಿ: ಮಾ.1ರಿಂದ ಶ್ರೀಶೈಲ ಮಹಾಕ್ಷೇತ್ರದಲ್ಲಿ ಮಹಾಶಿವರಾತ್ರಿ ಬ್ರಹ್ಮೋತ್ಸವ
ಇಂದು ಬೆಳಗ್ಗೆ 11:15ರ ಸುಮಾರಿನಲ್ಲಿ ಕೃಷ್ಣಮಠ ಪಾರ್ಕ್ ಹತ್ತಿರದ ಬಿ ಕೃಷ್ಣಪ್ಪ ಎಂಬವರ ಮನೆಯಲ್ಲಿ ಎರಡು ಸಿಲಿಂಡರ್ ಸ್ಫೋಟವಾಗಿದ್ದು, ಮನೆಯ ಒಳಭಾಗ ಸಂಪೂರ್ಣ ಜಖಮ್ ಆಗಿದೆ ಹಾಗೂ ಅಕ್ಕ ಪಕ್ಕದ ಮನೆಯ ಕಿಟಕಿಗಳು ಒಡೆದು ಹೋಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಠಾಣಾಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post