ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೃತಕ ಬಣ್ಣ ಬಳಸಿ ತಯಾರಿಸಲಾಗುವ ಕಾಟನ್ ಕ್ಯಾಂಡಿಗಳನ್ನು Cotton Candy ನಿಷೇಧಿಸಲಾಗುವುದು. ಆದರೆ ಬಣ್ಣ ರಹಿತ ಕಾಟನ್ ಕ್ಯಾಂಡಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ Dinesh Gundurao ತಿಳಿಸಿದ್ದಾರೆ.
In consideration of public health, we are banning the use of artificial colours in Gobi Manchurian and cotton candy. Violation of this ban may result in imprisonment for up to 7 years and a fine of up to 10 lakhs.
Following reports of substandard quality and the presence of… pic.twitter.com/z2KWHi8Jbd
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 11, 2024
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆಕರ್ಷಕ ಬಣ್ಣಕ್ಕಾಗಿ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸ್‌ರ್‌ಕಾರಕ ಅಂಶವನ್ನು ಹೊಂದಿರುವ ರೋಡಮೈನ್-ಬಿಯನ್ನು Rodamine-B ಸೇರಿಸಲಾಗುತ್ತಿದ್ದು, ಇದು ನಿಷೇಧಿತ ರಾಸಾಯನಿಕವಾಗಿದೆ ಎಂದರು.
ಕೃತಕ ರಾಸಾಯನಿಕ ಬಣ್ಣ ಬೆರೆಸಿ ತಯಾರಿಸಲಾಗುವ ಪಾನಿಪೂರಿ, ಗೋಬಿಮಂಚೂರಿ Gobimanchuri ಮತ್ತು ಕಬಾಬ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗುವುದು ಎಂದ ಅವರು, ಸಾಮಾನ್ಯ ಹೋಟೆಲ್‌ಗಳಲ್ಲಿ ವ್ಯಾಪಾರ ಮಾಡುವ ಗೋಬಿಮಂಚೂರಿ ಅಲ್ಲದೇ ತ್ರೀ ಸ್ಟಾರ್ ಹೋಟೆಲ್‌ಗಳಲ್ಲಿ ತಯಾರಾಗುವ ಮಂಚೂರಿ ಪದಾರ್ಥಗಳಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕವಾಗಿರುವ ರಾಸಾಯನಿಕಗಳಿರುವುದು ಪತ್ತೆಯಾಗಿರುವುದು ಆತಂಕದ ಸಂಗತಿ ಎಂದರು.
Also read: ಮಹಿಳೆ ಕೇವಲ ವ್ಯಕ್ತಿಯಲ್ಲ, ಒಂದು ಅದ್ಭುತ ಶಕ್ತಿ: ಡಾ. ಮಹಾಂತ ಮಹಾಸ್ವಾಮಿ
ಯಾವುದೇ ಆಹಾರಗಳನ್ನು ನಿಷೇಧಿಸುವುದಿಲ್ಲ. ಆದರೆ ಆಹಾರ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಬಳಸುವುದು ದೃಢಪಟ್ಟಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಜೈಲು ವಾಸವನ್ನೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಸಾಯನಿಕಯುಕ್ತ ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರೂ ಸಹ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣಕ್ಕಾಗಿ ಟ್ರಾಸೈನ್, ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೊಸಿನ್ ಬಳಸುತ್ತಿರುವುದು ಬೆಳಕಿಗೆ ಬಂದಿದ್ದು, ಪ್ರಸ್ತುತ ಕಾಟನ್ ಕ್ಯಾಂಡಿ ಮತ್ತು ಗೋಂಬಿ ಮಂಚೂರಿಯನ್ನು ಮಾತ್ರ ಪರೀಕ್ಷೆಗೆ ಒಳಪಡಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳನ್ನು ಪರೀಕ್ಷೆಗೊಳಪಡಿಸಲಾಗುವುದು ಎಂದರು.
ಆಹಾರದಲ್ಲಿ ಕೃತಕ ಬಣ್ಣ ಬಳಸಿದರೆ ಏನು ಶಿಕ್ಷೆ?
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷ ಜೈಲು ಶಿಕ್ಷೆ ಮತ್ತು ೧೦ಲಕ್ಷ ರೂ. ದಂಡ ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದು ಎಂದು ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post