ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣೆ Parliament Election ಘೋಷಣೆಗೆ ಕೆಲವೇ ಗಂಟೆಗಳು ಬಾಕಿಯಿರುವ ಮುನ್ನ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ Arvind Kejriwal ಅವರಿಗೆ ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಮಂಜೂರಾಗಿದ್ದು, ಬಿಗ್ ರಿಲೀಫ್ ದೊರೆತಂತಾಗಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ ಹಿನ್ನೆಲೆ ಅವರು ದೆಹಲಿ ಕೋರ್ಟ್’ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಕೇಜ್ರಿವಾಲ್’ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಸಿಎಂ ಕೇಜ್ರಿವಾಲ್ ಅವರು ನ್ಯಾಯಾಲಯದ ಮುಂದೆ ಖುದ್ಧು ಹಾಜರಾಗಿರಲಿಲ್ಲ. ಹೀಗಾಗಿ, ಸಮನ್ಸ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ಖುದ್ಧು ಹಾಜರಾಗಿದ್ದು, ಇಡಿ ಸಲ್ಲಿಸಿದ ಎರಡು ದೂರುಗಳಲ್ಲಿ ರೂಸ್ ಅವೆನ್ಯೂ ಕೋರ್ಟ್’ನ ಎಸಿಎಂಎA ದಿವ್ಯಾ ಮಲ್ಹೋತ್ರಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್’ಗೆ ಜಾಮೀನು ಮಂಜೂರು ಮಾಡಿದ್ದಾರೆ. 15,000 ರೂ.ಗಳ ಜಾಮೀನು ಬಾಂಡ್ ಮತ್ತು 1 ಲಕ್ಷ ರೂ.ಗಳ ಶ್ಯೂರಿಟಿಯ ಮೇಲೆ ಅವರಿಗೆ ಜಾಮೀನು ನೀಡಲಾಗಿದೆ.
Also read: ಶೈಕ್ಷಣಿಕ ವಿದ್ಯಾಸಂಸ್ಥೆ, ಇಂಡಸ್ಟ್ರಿ ನಡುವೆ ಉತ್ತಮ ಸಂಬಂಧ ಅತ್ಯಗತ್ಯ: ಪುನ್ನೊಸ್ ಪಿ ಜಾನ್ ಅಭಿಪ್ರಾಯ
ಎಎಪಿ ಕಾನೂನು ಮುಖ್ಯಸ್ಥ ಸಂಜೀವ್ ನಾಸಿಯಾರ್, ನ್ಯಾಯಾಲಯವು ಸಿಎಂಗೆ (ಅರವಿಂದ್ ಕೇಜ್ರಿವಾಲ್) ಸಮನ್ಸ್ ನೀಡಿತ್ತು. ಕಳೆದ ಬಾರಿ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು. ಮತ್ತೆ ನಿರ್ದೇಶನ ನೀಡಿದಾಗ ಅವರು ದೈಹಿಕವಾಗಿ ಹಾಜರಾಗುವುದಾಗಿ ಹೇಳಿದ್ದು, ಇಂದು ಹಾಜರಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post