ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಕನ್ನಡದ ಕಣ್ಣು ಹೊಡಿಯಾಕ ಎಂಬ ಜನಪ್ರಿಯ ಗೀತೆಯನ್ನು ಹಾಡಿದ ಗಾಯಕಿ ಮಂಗ್ಲಿ(ಸತ್ಯವತಿ ರಾಥೋಡ್) #SingerMangli ಅವರ ಕಾರು ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗ್ಲಿ ಅವರು ತಮ್ಮ ಇಬ್ಬರು ಆಪ್ತರೊಂದಿಗೆ ಶಂಶಾಬಾದ್’ನಿಂದ ಹೈದಾರಾಬಾದ್’ಗೆ ಹಿಂತಿರುಗುತ್ತಿದ್ದರು. ಈ ವೇಳೆ ತೊಂಡಪಲ್ಲಿ ಎಂಬಲ್ಲಿ ಮಂಗ್ಲಿ ಅವರಿದ್ದ ಕಾರಿಗೆ ಹಿಂಬದಿಯಿಂದ ಭಾರೀ ವಾಹನವೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರಿಗೂ ಗಾಯಗಳಾಗಿವೆ.
ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಂಗ್ಲಿ ಎಂಬ ಹೆಸರಿನಿಂದ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಸತ್ಯವತಿ ರಾಥೋಡ್ ಅವರು, ಕನ್ನಡದ ರಾಬರ್ಟ್ ಚಿತ್ರದ ಕಣ್ಣು ಹೊಡಿಯಾಕ ಹಾಡಿನಿಂದ ಕರುನಾಡಿಗೆ ಚಿರಪರಿಚಿತರಾದರು. ಕಾಟೇರ ಚಿತ್ರದ ಪಸಂದಗವ್ನೆ ಹಾಡಿಗೂ ಸಹ ಅವರು ಧ್ವನಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post