ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಳ್ಳು ಭರವಸೆ ನೀಡುವಲ್ಲಿ ಕಾಂಗ್ರೆಸ್ಸಿಗರು ಶುದ್ಧ ಹಸ್ತರಾಗಿದ್ದು, ಸುಳ್ಳುಹೇಳುತ್ತಲೇ ಅವರು ದಿನ ಕಳೆಯುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ವಾಗ್ದಾಳಿ ನಡೆಸಿದರು.
ಫ್ರೀಡಂ ಪಾರ್ಕ್’ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಳು ಭರವಸೆ ನೀಡಲು ಕಾಂಗ್ರೆಸ್ ಸಿದ್ಧ ಹಸ್ತರು. ಕರ್ನಾಟಕದಲ್ಲೂ ಇದೇ ಆಗಿದೆ. ಸರ್ಕಾರ ಬಂದಾಗಲೂ ಇದೇ ರೀತಿ ಸುಳ್ಳು ಹೇಳುತ್ತಿದೆ ಸರ್ಕಾರ, ಆದರೆ ಮೋದಿ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ, ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಹೇಳುತ್ತ ದಿನ ಕಳೆಯುತ್ತಿದ್ದಾರೆ.
ಜನರನ್ನು ಲೂಟಿ ಮಾಡಿ ತಮ್ಮ ಜೇಬು ತುಂಬಿಕೊಳ್ಳುವುದೇ ಕಾಂಗ್ರೆಸ್ ಕೆಲಸ. ಅದಕ್ಕೆ ಕರ್ನಾಟಕದಲ್ಲಿ ಅವಕಾಶ ಸಿಕ್ಕಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಅವರ ಲೂಟಿ ಎಷ್ಟಾಗಿದೆ ಎಂದರೆ ಅವರಿಗೆ ಸರ್ಕಾರ ನಡೆಸಲು ಹಣ ಇಲ್ಲವಾಗಿದೆ ಎಂದು ಟೀಕಿಸಿದರು.
ಇಲ್ಲಿ ಸಿಎಂ, ಶ್ಯಾಡೋ ಸಿಎಂ ಅಲ್ಲದೇ ದೆಹಲಿಯಲ್ಲಿ ಕಲೆಕ್ಟರ್ ಸಹ ಕಾಂಗ್ರೆಸ್’ನಲ್ಲಿದ್ದಾರೆ. ಇದರಿಂದ ಕರ್ನಾಟಕದ ಜನತೆ ಮೇಲೆ ಪ್ರಭಾವ ಭೀರುತ್ತಿದೆ. ಆದ್ದರಿಂದ ಲೋಕಸಭೆಯಲ್ಲಿ ಬಿಜೆಪಿಗೆ ಮತ ಹಾಕಿ ನಿಮ್ಮ ಸೇವೆಗೆ ಅವಕಾಶ ನೀಡಿ ಎಂದರು.
ಹಿಂದೂ ಸಮಾಜದ ಶಕ್ತಿಯ ದುರ್ಬಲ ಮಾಡಲು ಅವರು ಹೊರಟಿದ್ದಾರೆ. ಶಕ್ತಿ ಹೆಚ್ಚು ಮಾಡಲು ನಾವು ಹೊರಟಿದ್ದೇವೆ. ಭಾರತೀಯ ನಾರಿಯನ್ನು ಪ್ರಬಲ ಗೊಳಿಸುತ್ತಿದ್ದೇವೆ ಎಂದರು.
Also read: ಮಂಡ್ಯದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ
ಬಿಜೆಪಿಯ ಮುಖ್ಯ ಉದ್ದೇಶ ವಿಕಾಸ, ಬಡವರ ಕಲ್ಯಾಣ, ಸಧೃಡ ರಾಷ್ಟ್ರ ನಿರ್ಮಾಣ. ಕಾಂಗ್ರೆಸ್ ಬಳಿ ವಿಕಾಸದ ಅಜೆಂಡಾ ಇಲ್ಲ ಆದ್ದರಿಂದ ಬೇರೆ ಬೇರೆ ತಂತ್ರ ಬಳಸುತ್ತಿದ್ದಾರೆ. ಅವರ ಬರೀ ಸುಳ್ಳು ಹೇಳುತ್ತ ಹೊರಡುತ್ತಿದ್ದಾರೆ. ತಮ್ಮ ಸುಳ್ಳು ಮುಚ್ಚಲು ಹೊಸ ಸುಳ್ಳು ಹೇಳುತ್ತಿದ್ದಾರೆ. ಸಿಕ್ಕಿ ಹಾಕಿಕೊಂಡಾಗ ತಮ್ಮ ತಪ್ಪನ್ನು ಬೇರೆಯವರ ತಲೆಗೆ ಕಟ್ಟುತ್ತಾರೆ ಎಂದು ಟೀಕಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















