ಕಲ್ಪ ಮೀಡಿಯಾ ಹೌಸ್ | ಬೀರೂರು |
ಪಟ್ಟಣದಲ್ಲಿರುವ ಖ್ಯಾತ ಪ್ರೀತಿ ಕ್ಯಾಂಟೀನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ Shiva Rajkumar ಇಂದು ತಿಂಡಿ ಸವಿದು, ಮೆಚ್ಚುಗೆ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿರುವ ತಮ್ಮ ಪತ್ನಿ ಗೀತಾ Geetha ಅವರೊಂದಿಗೆ ಬೆಂಗಳೂರಿನಿಂದ ಶಿವಮೊಗ್ಗೆಕ್ಕೆ ಆಗಮಿಸುವ ವೇಳೆ ಬೀರೂರು ಪ್ರೀತಿ ಕ್ಯಾಂಟೀನಲ್ಲಿ ಇಡ್ಲಿ, ವಡೆ, ದೋಸೆ ಸವಿದು, ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಟಾರ್ ಎಂಬ ಅಹಂ ಇಲ್ಲದೇ ಸಿಂಪಲ್ ಆಗಿ ಕ್ಯಾಂಟಿನಲ್ಲಿ ಎಲ್ಲರೊಂದಿಗೆ ತಿಂಡಿ ಸವಿದಿದ್ದನ್ನು ಕಂಡು ಅಭಿಮಾನಿಗೆ ಜೈಕಾರ ಹಾಕಿದರು. ಬೀರೂರಿಗೆ ಆಗಮಿಸಿದ ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು.
Also read: ನಾನು ಮಾಡಿದ ತಪ್ಪೇನು? ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಕಾಂತೇಶ್ ಸ್ಪಷ್ಟನೆ
ಇದಕ್ಕೂ ಮುನ್ನ ಕಡೂರು ಮಾರ್ಗವಾಗಿ ತೆರಳುವ ವೇಳೆ ಅಲ್ಲಿನ ಪಕ್ಷದ ಮುಖಂಡರು, ಕಾರ್ಯಕರ್ತರು ಶಿವರಾಜಕುಮಾರ್ ದಂಪತಿಗಳನ್ನು ಅಭಿನಂದಿಸಿ, ಶುಭ ಕೋರಿದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಕಡೂರು ಶಾಸಕ ಆನಂದ್ ಸೇರಿದಂತೆ ಹಲವರು ಜೊತೆಯಲ್ಲಿದ್ದರು.
ತಮ್ಮ ನೆಚ್ಚಿನ ನಟ ಶಿವರಾಜಕುಮಾರ್ ಅವರನ್ನು ನೋಡಲು ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post