ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಸ್ಟಾಂಡ್ ರಾಘುವಿನಿಂದ ಕ್ಷೇತ್ರದಲ್ಲಿ ಏನು ಅಭಿವೃದ್ಧಿಯಾಗಿದೆ? ನಮಗೆ ಅಧಿಕಾರ ಕೊಡಿ, ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ Beluru Gopala Krishna ವಾಗ್ದಾಳಿ ನಡೆಸಿದ್ದಾರೆ.
ಲಗಾನ್ ಮಂದಿರದಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ಮಾತನಾಡಿದ ಅವರು, ಬಸ್ಟಾಂಡ್ ರಾಘುನಿಂದ ಏನೂ ಅಭಿವೃದ್ಧಿ ಆಗಿಲ್ಲ. 80 ಕೋಟಿ ಜೋಗ ಅಭಿವೃದ್ಧಿ ಮಾಡಿರುವುದಾಗಿ ಹೇಳಿದಾರೆ. ಆದರೆ, 20 ಕೋಟಿ ರೂ. ಅಭಿವೃದ್ಧಿ ಸಹ ಆಗಿಲ್ಲ. ಶಿವಮೊಗ್ಗ ತುಮಕೂರು ಹೈವೆಯನ್ನು ಪೂರ್ಣಗೊಳಿಸಲು 18 ವರ್ಷ ಕಳೆದರೂ ಆಗಿಲ್ಲ ನಿಮಗೆ ಎಂದು ಕಿಡಿ ಕಾರಿದ ಅವರು, ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಗೆಲ್ಲಿಸಿ ಎಂದು ಕರೆ ನೀಡಿದರು.

Also read: ಗ್ಯಾರಂಟಿಯಾಗಿ ಗೀತಾ ಶಿವರಾಜ್ ಕುಮಾರ್ ಗೆಲ್ಲುತ್ತಾರೆ | ಕೆಪಿಸಿಸಿ ಸದಸ್ಯ ನಾಗರಾಜ್
ಶಿವಮೊಗ್ಗಕ್ಕೆ ನಗರಕ್ಕೆ ಆಗಮಿಸಿದ ಗೀತಾ ಶಿವರಾಜಕುಮಾರ್ Geetha Shivarajkumar ಹಾಗೂ ಶಿವರಾಜಕುಮಾರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮಾಚೇನಹಳ್ಳಿ ಬಳಿಯಲ್ಲಿ ಅವರಿಗೆ ಸ್ವಾಗತಿಸಿ, ಬಿಎಚ್ ರಸ್ತೆ ಮೂಲಕ ಅದ್ದೂರಿಯಾಗಿ ಮೆರೆವಣಿಗೆಯಲ್ಲಿ ಕರೆ ತರಲಾಯಿತು. ಬೈಕ್ ರ‍್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post