ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ/ಶಿವಮೊಗ್ಗ |
ಹಾಲಿ ಸಂಸದ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ MP B Y Raghavendra ಅವರು ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಹಲವು ಮಠಾಧೀಶರನ್ನು ಭೇಟಿಯಾಗಿ, ಮಾತುಕತೆ ನಡೆಸಿ, ಬೆಂಬಲ ಕೋರಿದರು.
ಇಂದು ಚಿತ್ರದುರ್ಗದಲ್ಲಿರುವ ಭೋವಿ ಗುರುಪೀಠಕ್ಕೆ ತೆರಳಿದ ರಾಘವೇಂದ್ರ ಅವರು ಹಲವು ಮಠಾಧೀಶರನ್ನು ಒಟ್ಟಾಗಿ ಭೇಟಿಯಾಗಿ ಚರ್ಚೆ ನಡೆಸಿದರು.
Also read: ಈಶ್ವರಪ್ಪ ಮಿಂಚಿನ ಸಂಚಾರ | ನಿರಂತರ ಪ್ರಚಾರ | ಭಾರೀ ಬೆಂಬಲ
ಯಾವೆಲ್ಲ ಮಠಾಧೀಶರ ಭೇಟಿ?
ಹೊಸರ್ದು ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು ಕುಂಚಿಟಿಗ ಮಹಾಸಂಸ್ಥಾನ ಮಠ, ಚಿತ್ರದುರ್ಗ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಬೋವಿ ಗುರುಪೀಠ, ಚಿತ್ರದುರ್ಗ ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಮಡಿವಾಳ ಗುರುಪೀಠ, ಶಿವಮೊಗ್ಗ ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ ಶ್ರೀ ನಾರಾಯಣ ಗುರು ಪೀಠ, ತಂಗಡಗಿ ಜಗದ್ಗುರು ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳು ಹಡಪದ ಅಪ್ಪಣ್ಣ ಗುರುಪೀಠ, ಬೆಳಗಾವಿ ಜಿಲ್ಲೆಯ ತೆಲಸಂಗ ಜಗದ್ಗುರು ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು ಕುಂಬಾರ ಗುರುಪೀಠ, ರಾಯಚೂರು ಜಿಲ್ಲೆಯ ಇರಕಲ್ ಪೂಜ್ಯ ಶ್ರೀ ಬಸವ ಪ್ರಸಾದ ಸ್ವಾಮಿಗಳು ಶಿವಶಕ್ತಿ ಪೀಠ, ಕೊರಟಗೆರೆ ತಂಗನಹಳ್ಳಿ ಪೂಜ್ಯಶ್ರೀ ಮಹಾಲಿಂಗ ಸ್ವಾಮಿಗಳು ಕಾಶಿ ಅನ್ನಪೂರ್ಣೇಶ್ವರಿ ಮಠ, ಶಿಕಾರಿಪುರ ಪೂಜ್ಯಶ್ರೀ ಚನ್ನಬಸವ ಮಹಾಸ್ವಾಮಿಗಳು ವಿರಕ್ತಮಠ, ಚಿತ್ರದುರ್ಗ ಮಾದರ ಚನ್ನಯ್ಯ ಗುರುಪೀಠದಲ್ಲಿ ಜಗದ್ಗುರು ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿಗಳು, ಚಿತ್ರದುರ್ಗ ಶಿವಶರಣ ಮಾದರ ಚನ್ನಯ್ಯ ಗುರುಪೀಠ ಸ್ವಾಮಿಗಳ ಆಶೀರ್ವಾದ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post