ಕಲ್ಪ ಮೀಡಿಯಾ ಹೌಸ್ | ಹಿಮಾಚಲ ಪ್ರದೇಶ |
ಅಂತಾರಾಷ್ಟ್ರೀಯ ಖ್ಯಾತಿಯ ನಟಿ, ಹಿಂದುತ್ವವಾದಿ ಸೂಪರ್ ಸ್ಟಾರ್ ಕಂಗನಾ ರನಾವತ್ #KanganaRanaut ಅವರಿಗೆ ಬಿಜೆಪಿ ಟಿಕೇಟ್ ಘೋಷಣೆ ಮಾಡಿದ್ದು, ಈ ಮೂಲಕ ಹಲವು ತಿಂಗಳುಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಬಿಜೆಪಿ #BJP ಇಂದು ತನ್ನ ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ಅವರಿಗೆ ಉತ್ತರ ಪ್ರದೇಶದ ಮೀರತ್’ನಿಂದ #Meerut ಪ್ರಸಿದ್ಧ ದೂರದರ್ಶನ ನಟ ಅರುಣ್ ಗೋವಿಲ್ #ActorArunGovil ಅವರನ್ನು ಕಣಕ್ಕಿಳಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ನನ್ನ ಪ್ರೀತಿಯ ಭಾರತ ಮತ್ತು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಯಾವಾಗಲೂ ನನ್ನ ಬೇಷರತ್ ಬೆಂಬಲವಿದೆ, ಇಂದು ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ನನ್ನ ಜನ್ಮಸ್ಥಳ ಹಿಮಾಚಲ ಪ್ರದೇಶ, ಮಂಡಿ (ಕ್ಷೇತ್ರ) ದಿಂದ ನನ್ನನ್ನು ಲೋಕಸಭೆಯ ಅಭ್ಯರ್ಥಿ ಎಂದು ಘೋಷಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post