No Result
View All Result
Why The Hell Did You Make Manya Surve a Hero?: Sanjay Gupta Opens Up on Underworld Threats
English Articles

Why The Hell Did You Make Manya Surve a Hero?: Sanjay Gupta Opens Up on Underworld Threats

by ಕಲ್ಪ ನ್ಯೂಸ್
May 13, 2026
0

Kalpa Media House  |  Mumbai | From revolutionising Bollywood’s gangster genre with cult blockbusters like Kaante, Shootout at Lokhandwala, Shootout...

Read moreDetails
Amazon Expands Health Coverage for 90,000 Delivery Associates across India

Amazon Expands Health Coverage for 90,000 Delivery Associates across India

May 12, 2026
IBM and Yotta Announce Plans to Deliver Agentic AI Platform for Indian Enterprises

IBM and Yotta Announce Plans to Deliver Agentic AI Platform for Indian Enterprises

May 9, 2026
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
  • Advertise With Us
  • Grievances
  • About Us
  • Contact Us
Wednesday, May 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಸರ್ಕಾರಿ ಶಾಲೆ ದತ್ತು ನೆಪದಲ್ಲಿ ಜಾಗ ಕಬಳಿಕೆ? ಶೌಚಾಲಯವಿಲ್ಲದೇ ಮಕ್ಕಳ ಪರದಾಟ

ಹುಣಸೇಕಟ್ಟೆ ಸರ್ಕಾರಿ ಪ್ರೌಢಶಾಲೆಯ ದುರಂತ ಕಥೆ | ಅಭಿವೃದ್ದಿಯೆಂಬುದಿಲ್ಲಿ ಗಗನ ಚುಕ್ಕಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 25, 2024
in ಭದ್ರಾವತಿ
0
ಸರ್ಕಾರಿ ಶಾಲೆ ದತ್ತು ನೆಪದಲ್ಲಿ ಜಾಗ ಕಬಳಿಕೆ? ಶೌಚಾಲಯವಿಲ್ಲದೇ ಮಕ್ಕಳ ಪರದಾಟ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  |

ಸರ್ಕಾರಿ ಶಾಲೆಯನ್ನು ದತ್ತು ಪಡೆಯುತ್ತೇನೆ ಎಂದು ದಾಖಲೆ ರೂಪಿಸಿಕೊಂಡು ಶಾಲೆಯ ಜಾಗವನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಹುಣಸೇಕಟ್ಟೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ಡಿಡಿಪಿಐ ಹಾಗೂ ಭದ್ರಾವತಿ ಬಿಇಒಗೆ ಪ್ರತ್ಯೇಕ ದೂರು ಸಲ್ಲಿಸಲಾಗಿದೆ.
ಸರ್ಕಾರಿ ಶಾಲೆಯನ್ನು ದತ್ತು ಪಡೆಯುತ್ತೇನೆ ಎಂದು ದಾಖಲೆ ರೂಪಿಸಿಕೊಂಡು ಸರ್ಕಾರಿ ಶಾಲೆಯ ಜಾಗವನ್ನೇ ಒತ್ತುವರಿ ಮಾಡಿಕೊಂಡಿದ್ದಲ್ಲದೇ, ಶಾಲೆಯ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಕ್ರಮವಾಗಿ ಕಳಪೆ ಕಾಮಗಾರಿ ಮಾಡಿ ಅರ್ಧಕ್ಕೆ ಕೈ ಬಿಟ್ಟಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಸರ್ಕಾರಿ ಶಾಲೆಯನ್ನು ಈ ದತ್ತು ಸ್ವೀಕಾರದಿಂದ ಮುಕ್ತಗೊಳಿಸಿ, ಅಕ್ರಮ ದಾಖಲೆಗಳೊಂದಿಗೆ ಶಾಲಾ ಜಾಗವನ್ನು ಉಳಿಸಬೇಕೆಂದು ಭದ್ರಾವತಿ ತಾಲೂಕ್ ಹುಣಸೇಕಟ್ಟೆ ಗ್ರಾಮದ ನಿವಾಸಿ, ವಿದ್ಯಾರ್ಥಿನಿಯ ತಂದೆ ಶೇಷಣ್ಣ, ಕೇಶವ, ಬಾಬು ಹಾಗೂ ಇತರರು ದೂರು ಸಲ್ಲಿಸಿದ್ದಾರೆ.

ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲದೆ ಪರದಾಟ ಪಡುತ್ತಿರುವಾಗ ಇದನ್ನು ಮಾಡಲು ಜಿಲ್ಲಾ ಪಂಚಾಯತ್ ನ ನರೇಗಾ ಯೋಜನೆಯನ್ನು ಬಳಸಿಕೊಂಡು ಕೆಲಸವನ್ನು ಸಂಪೂರ್ಣಗೊಳಿಸದೇ ವಂಚಿಸಿರುವ ಹಾಗೂ ದತ್ತು ಸ್ವೀಕಾರ ಹೆಸರಿನಲ್ಲಿ ಶಾಲೆಗೆ ಬಂದು ಶಾಲೆಯ ಜಾಗವನ್ನೇ ಕಬಳಿಸಿರುವ ಎಸ್. ವಿರೂಪಾಕ್ಷಪ್ಪ ಹಾಗೂ ಇತರರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಸೂಕ್ತ ದಾಖಲೆಗಳ ಸಹಿತ ದೂರು ನೀಡಿದ್ದಾರೆ.
ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗಾಗಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಕಡುಬಡವರ ಹಾಗೂ ಕೃಷಿ ಕಾರ್ಮಿಕರ ಮಕ್ಕಳು ಶೌಚಾಲಯವಿಲ್ಲದೆ ಹಾಗೂ ಶಾಲೆಯಲ್ಲಿ ವ್ಯವಸ್ಥಿತ ಮೂಲಭೂತ ಸೌಕರ್ಯಗಳಿಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ವಿರೂಪಾಕ್ಷಪ್ಪ ಹಿಂದೆ ಈ ಶಾಲೆಯ ಪಕ್ಕದಲ್ಲಿ ಅವರ ತಾಯಿಯ ಹೆಸರಿಗೆ ಉಚಿತವಾಗಿ 40×80 ಅಳತೆಯ ನಿವೇಶನವನ್ನು ಕಂಬದಾಳು ಹೊಸೂರಿನ ಗ್ರಾಮ ಪಂಚಾಯಿತಿ ಮೂಲಕ ಇಂದಿರಾ ಆವಾಜ್ ಯೋಜನೆಯಲ್ಲಿ ಪಡೆದಿದ್ದು, ಅದನ್ನು ಮಾರಿದ್ದಾರೆ. ಈಗ ಜಾಗವನ್ನು ಕಬಳಿಸುವ ಉದ್ದೇಶದಿಂದ 30-10- 2018 ರಂದು ಶಾಲಾ ದತ್ತು ಯೋಜನೆ ನಿರ್ವಹಣಾ ಸಮಿತಿ ಹೆಸರಿನಲ್ಲಿ ಶಾಲೆಗೆ ಬಂದು ಈ ಸಮಿತಿಗೆ ಕಾರ್ಯದರ್ಶಿಯಾಗಿ, ಅವರ ಪತ್ನಿ ಗಾಯಿತ್ರಿ ವಿರುಪಾಕ್ಷಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ವಂಚಿಸಿದ್ದಾರೆ.

ಹಿಂದೆ ಇದೇ ಶಾಲೆಯಲ್ಲಿದ್ದ ಈಗ ನಿವೃತ್ತರಾಗಿರುವ ಮುಖ್ಯ ಶಿಕ್ಷಕ ಶಿವಾನಾಯಕ ಅವರಿಗೆ 2014ರ ಆಗಸ್ಟ್ 20ರಂದು ಅರ್ಜಿ ಬರೆದುಕೊಂಡು ಶಾಲಾ ಮಕ್ಕಳಿಗೆ ತಂತ್ರಜ್ಞಾನ ಶಿಕ್ಷಣ, ಎನ್’ಸಿಸಿ, ಸ್ಕೌಟ್, ಸೇವಾದಳ, ಕ್ರೀಡಾ ಆದ್ಯತೆ, ವ್ಯಕ್ತಿತ್ವ ವಿಕಸನ, ಎಸ್ಸಿ ಎಸ್ಟಿ ಮಕ್ಕಳ ಅಭಿವೃದ್ಧಿ, ಅವಶ್ಯ ಕೊಠಡಿಗಳ ನಿರ್ಮಾಣಕ್ಕೆ ದಾನಿಗಳ ಸಹಾಯ ಪಡೆದು ಕಾರ್ಯಕ್ರಮ ಮಾಡುವುದಾಗಿ ಹೇಳಿ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ.

ಶಾಲಾ ಅಭಿವೃದ್ದಿಗೆ ಇಂತಹ ಹಲವು ಯೋಜನೆಗಳನ್ನು ನೀಡುತ್ತೇವೆ ಎಂದು ವಂಚಿಸಿರುವ ಅವರು ಭದ್ರಾವತಿಯ ಅಂದಿನ ಬಿಇಓ ಅವರ ದಾರಿ ತಪ್ಪಿಸಿ 2018ರಲ್ಲಿ ಇದನ್ನು ಕಚೇರಿಯಲ್ಲಿ ನೋಂದಾಯಿಸಿಕೊಂಡು, ಶಾಲೆಗೆ ಬಂದು ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಮೂಲಕ ಹೆಣ್ಣು ಮಕ್ಕಳ ಶೌಚಾಲಯ ಮಾಡಲು 3.7 ಲಕ್ಷ ಹಣ ಪಡೆದು ವಂಚಿಸಿದ್ದಾರೆ.
ಅಂತೆಯೇ ಶಾಲಾ ಕಟ್ಟಡ ದುರಸ್ತಿ ಕಾಮಗಾರಿ ಸುಣ್ಣಬಣ್ಣಕ್ಕಾಗಿ 2.09 ಲಕ್ಷ, ಶಾಲೆ ಹಿಂಭಾಗದ ಕಾಂಪೌಂಡ್ ನಿರ್ಮಾಣಕ್ಕಾಗಿ 6.4 ಲಕ್ಷ ಹಣವನ್ನು ಪಡೆದಿದ್ದಾರೆ. ಅದೇ ಹೆಸರಿನಲ್ಲಿ ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡು, ಸುಳ್ಳು ದಾಖಲೆ ನೀಡಿ ಆ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇವರ ಜಾಗಕ್ಕೆ ಸೇರಿಕೊಂಡಂತೆ ಸರ್ಕಾರಿ ಹಣದಲ್ಲಿ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿರೂಪಾಕ್ಷಪ್ಪ ಶಾಲೆಯ ಪಕ್ಕದಲ್ಲಿರುವ ಜಾಗವನ್ಬು ತಮ್ಮ ಹೆಂಡತಿ ಹೆಸರಿಗೆ ಮಾಡಿಕೊಂಡಿರುವ ನಿವೇಶನಕ್ಕೆ ಕಾಂಪೌಂಡ್ ಕಟ್ಟಿಕೊಳ್ಳಲು ಈ ಹಣವನ್ನು ಬಳಸಿಕೊಂಡಿದ್ದಾರೆ. ಇಲ್ಲಿಯವರೆಗೂ ಜೇಬಿ ನಿಂದ ಒಂದು ಪೈಸೆಯನ್ನು ಸಹ ಹಾಕದೆ, ಯಾವುದೇ ಕಾರ್ಯಕ್ರಮ ನಡೆಸದೆ ಮಕ್ಕಳಿಗೆ, ಶಾಲೆಗೆ ಗ್ರಾಮಸ್ಥರಿಗೆ ವಂಚಿಸಿರುವ ಈ ಕಮಿಟಿಯ ವಿರೂಪಾಕ್ಷಪ್ಪ, ಗಾಯತ್ರಿ ವಿರುಪಾಕ್ಷಪ್ಪ ಹಾಗೂ ಸಮಿತಿಯ ತಮ್ಮಡಿಹಳ್ಳಿಯ ಪ್ರಸಾದ್ ಅವರನ್ನು ಶಾಲೆಯಿಂದ ಹೊರಗೆ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ದತ್ತು ಯೋಜನಾ ಅಡಿ ಅಭಿವೃದ್ದಿ ಮಾಡುತ್ತಿರುವುದಾಗಿ ಶಾಲೆಯ ಮುಂಭಾಗದಲ್ಲಿ ದೊಡ್ಡದಾಗಿ ಬೋರ್ಡ್ ಹಾಕಿಕೊಂಡು ಶಾಲೆಯ ಭೂಮಿಯನ್ನು ತನ್ನ ಹಾಗೂ ತನ್ನ ಪತ್ನಿ ಹೆಸರಿನಲ್ಲಿ ದೋಚಿರುವ ಈ ವಿರುಪಾಕ್ಷಪ್ಪರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈಗ ಪ್ರಸ್ತುತ ಇರುವ ಸರ್ಕಾರಿ ಶಾಲೆಯ ಜಾಗ ಗುಂಡುತೋಪು ಜಾಗವಾಗಿದ್ದು, ಅಲ್ಲಿನ 1.24 ಎಕರೆ ಭೂಮಿಯಲ್ಲಿ ಈ ದತ್ತು ಸಮಿತಿಯ ಹೆಸರಿನಲ್ಲಿ ಬಂದ ವಿರೂಪಾಕ್ಷಪ್ಪ ಅವರು ಹಾಗೂ ಅವರ ಪತ್ನಿ ಗಾಯತ್ರಿ ಅವರು ತಲಾ ಒಂದೊಂದು ನಿವೇಶನವನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸುಮಾರು 20 ಗುಂಟೆ ಜಾಗವನ್ನು ಕಬಳಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಿ ಶಾಲಾ ಜಾಗವನ್ನು ಉಳಿಸಬೇಕು. ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಹಾಗೂ ವಿಶೇಷವಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಶಿವಮೊಗ್ಗ ಹಾಗೂ ಉಪ ವಿಭಾಗ ಭದ್ರಾವತಿ ಅವರ ವಿರುದ್ಧವೂ ಸಹ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Kalahamsa Infotech private limitedಗ್ರಾಮ ಪಂಚಾಯಿತಿಯವರು ದಾಖಲೆಗಳನ್ನು ಸರಿಯಾಗಿ ನೋಡದೆ ಬೇಕಾಬಿಟ್ಟಿ ನಿವೇಶನವನ್ನು ಕೊಟ್ಟದ್ದಲ್ಲದೆ, ಸರ್ಕಾರಿ ಶಾಲೆಯ ಕೆಲಸ ಆಗದಿದ್ದರೂ ಇದಕ್ಕೆ ಅನುಮತಿ ನೀಡಿ ಹಣ ಕಬಳಿಸಲು ಪ್ರೇರಣೆ ನೀಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಹ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಎರಡು ವರ್ಷದಿಂದ ನೆನೆಗುದಿಗೆ ಬಿದ್ದ ಶೌಚಾಲಯ ನಿರ್ಮಾಣ, ಹಣ ಮಾತ್ರ ಖಾಲಿಯಾಗಿದೆ ಎಂದು ಹೇಳಲಾಗಿದ್ದು, ಹಿಂದೆ ಹಾಗೂ ಪಕ್ಕ ನಿವೇಶನ ಉಳಿಸಿಕೊಂಡು ಕಾಂಪೌಂಡ್ ಕಟ್ಟಲಾಗಿದೆ. ಶಾಲಾ ಎಸ್ ಡಿ ಎಂ ಸಿ ಸಮಿತಿ ಬುಕ್ಕಿಗಷ್ಟೆ ಸೀಮಿತ: ದತ್ತು ಯೋಜನಾ ನಿರ್ವಹಣಾ ಮಂಡಳಿಯದೇ ಬೋರ್ಡ್ ಕಾರುಬಾರಾಗಿದೆ ಎಂದು ಆರೋಪಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/02/VID-20240229-WA0026.mp4
Tags: AdoptionBhadravathiGovernment SchoolHunasekatteKannada News WebsiteLatest News KannadaSchoolShimogaShivamoggaShivamogga Newsದತ್ತು ಸ್ವೀಕಾರಭದ್ರಾವತಿಸರ್ಕಾರಿ ಶಾಲೆಹುಣಸೇಕಟ್ಟೆ
Share197Tweet123Send
Previous Post

ಹಣೆಗೆ ಕುಂಕುಮ ಹಚ್ಚಿಕೊಳ್ಳಲು ಆರ್. ಅಶೋಕ್ ನಿರಾಕರಣೆ | ಕಾಂಗ್ರೆಸ್ ಹಿಗ್ಗಾಮುಗ್ಗಾ ಚಾಟಿ

Next Post

ಮೈಸೂರು | ಹೋಳಿಯಲ್ಲಿ ಮಿಂದೆದ್ದ ಮೂಕಾಂಬಿಕಾ ಬಡಾವಣೆಯ ನಿವಾಸಿಗಳು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮೈಸೂರು | ಹೋಳಿಯಲ್ಲಿ ಮಿಂದೆದ್ದ ಮೂಕಾಂಬಿಕಾ ಬಡಾವಣೆಯ ನಿವಾಸಿಗಳು

ಮೈಸೂರು | ಹೋಳಿಯಲ್ಲಿ ಮಿಂದೆದ್ದ ಮೂಕಾಂಬಿಕಾ ಬಡಾವಣೆಯ ನಿವಾಸಿಗಳು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಮೇ 14ರ ನಾಳೆ ಶಿವಮೊಗ್ಗದ ಬಹಳಷ್ಟು ಕಡೆ ಕರೆಂಟ್ ಇರಲ್ಲ | ಇಲ್ಲಿದೆ ಡೀಟೇಲ್ಸ್

May 13, 2026
ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ | ಭಕ್ತರಿಗೆ ಅನುಕೂಲ

ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ | ಭಕ್ತರಿಗೆ ಅನುಕೂಲ

May 13, 2026
Why The Hell Did You Make Manya Surve a Hero?: Sanjay Gupta Opens Up on Underworld Threats

Why The Hell Did You Make Manya Surve a Hero?: Sanjay Gupta Opens Up on Underworld Threats

May 13, 2026
ಶಿವಮೊಗ್ಗ | ಗ್ರಾಮಸ್ಥರನ್ನ ಅಟ್ಟಿಸಿಕೊಂಡು ಬಂದ ಕಾಡಾನೆ, ಆತಂಕ ಸೃಷ್ಟಿ

ಶಿವಮೊಗ್ಗ | ಗ್ರಾಮಸ್ಥರನ್ನ ಅಟ್ಟಿಸಿಕೊಂಡು ಬಂದ ಕಾಡಾನೆ, ಆತಂಕ ಸೃಷ್ಟಿ

May 13, 2026
ಶಿವಮೊಗ್ಗ | ನೀಟ್ ಪರೀಕ್ಷೆ ಅಕ್ರಮ | ಸಂಸದರ ಮನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಯತ್ನ

ಶಿವಮೊಗ್ಗ | ನೀಟ್ ಪರೀಕ್ಷೆ ಅಕ್ರಮ | ಸಂಸದರ ಮನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಯತ್ನ

May 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL