ಕಲ್ಪ ಮೀಡಿಯಾ ಹೌಸ್ | ಕೊಲ್ಲಂ |
ಇಲ್ಲಿನ ಚಮಯವಿಳಕ್ಕುಂ ಉತ್ಸವದ ವೇಳೆ ಬೃಹತ್ ರಥದ ಚಕ್ರದಡಿ ಸಿಲುಕಿ ಐದು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕೇರಳದ ಕೊಲ್ಲಂ ಕೊಟ್ಟನ್ ಕುಳಂಗರ ದೇವಾಲಯದಲ್ಲಿ ಈ ಘೋರ ಘಟನೆ ನಡೆದಿದ್ದು, ರಥದ ದೊಡ್ಡ ಚಕ್ರಗಳಡಿಗೆ ಸಿಲುಕಿ ಐದು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಕ್ಷೇತ್ರ, ಚವರ ನಿವಾಸಿ ದಂಪತಿಯ ಪುತ್ರಿಯಾಗಿದ್ದು, ತನ್ನ ಪೋಷಕರ ಜೊತೆಗೆ ದೇವಸ್ಥಾನಕ್ಕೆ ಬಂದಿದ್ದಳು. ಘಟನೆ ನಡೆದ ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬಾಲಕಿ, ಅದಾಗಲೇ ಮೃತಪಟ್ಟಿದ್ದಳು.
Also read: ಕಾಡುಗಳ್ಳ ವೀರಪ್ಪನ್ ಪುತ್ರಿ ಲೋಕಸಭಾ ಚುನಾವಣೆ ಕಣಕ್ಕೆ | ಯಾವ ಪಕ್ಷ? ಎಲ್ಲಿಂದ ಸ್ಪರ್ಧೆ?\
ಮಾರ್ಚ್ 24ರಂದು ರಾತ್ರಿ 11:30ರ ವೇಳೆಗೆ ಈ ಘಟನೆ ನಡೆದಿದೆ. ಮೃತರ ಕುಟುಂಬಸ್ಥರ ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post