ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಸಕ ಚನ್ನಬಸಪ್ಪ ನನ್ನ ಮುಂದೆ ಬೆಳೆದ ಹುಡುಗ, ಈಗ ನನ್ನನ್ನೇ ಪ್ರಶ್ನಿಸುವಷ್ಟು ಬೆಳೆದಿದ್ದಾನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಪಕ್ಷಕ್ಕೆ ಬಂದರೆ ಬರಲಿ ಬಿಟ್ಟರೆ ಬಿಡಲಿ. ಅವರೆಷ್ಟು ಮತ ತೆಗೆದುಕೊಳ್ಳುತ್ತಾರೆ ನೋಡೋಣ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಶಾಂತವಾಗಿಯೇ ಉತ್ತರಿಸಿದ ಅವರು, ಚನ್ನಬಸಪ್ಪ ನನ್ನ ಮುಂದೆ ಬೆಳೆದ ಹುಡುಗ. ಈಗ ನನ್ನನ್ನೇ ಪ್ರಶ್ನೆ ಕೇಳುವಷ್ಟು ದೊಡ್ಡವನಾಗಿದ್ದಾನೆ. ಆತನಿಗೆ ನಾನು ಏನೂ ಹೇಳುವುದಿಲ್ಲ. ಏಕೆಂದರೆ ನಾನು ಗೆದ್ದ ಮೇಲೆ ಅವನು ನನ್ನ ಜೊತೆಗೇ ಬರಬೇಕು ಎಂದರು.
ಅಖಿಲೇಶ್ ಯಾದವ್ Akhilesh Yadav ಕೂಡ ನನಗೆ ಫೋನ್ ಮಾಡಿದ್ದರು. ನಾನು ಫೋನ್ ಎತ್ತಲಿಲ್ಲ. ಹೋದ ಕಡೆಯಲ್ಲೆಲ್ಲ ನನಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಜೊತೆಗೆ ದೇವರ ಪ್ರಸಾದವೂ ಸಿಕ್ಕಿದೆ. ದೈವ ಭಕ್ತನಾದ ನಾನು ಇದನ್ನು ನಂಬುತ್ತೇನೆ ಎಂದರು.
Also read: ಲೋಕಸಭಾ ಚುನಾವಣೆ | ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ | ಯಾರಿಗೆಲ್ಲಾ ಸ್ಥಾನ?
ಭದ್ರಾವತಿಯ ದಾನವಾಡಿ ರಂಗಸ್ವಾಮಿ ದೇವರ ಪ್ರಸಾದ ಅತ್ಯಂತ ಪ್ರಸಿದ್ಧಿಯಾಗಿದೆ. ಅಲ್ಲಿ ನಾನು ಕುಳಿತು ಪ್ರಸಾದ ಕೇಳಿದೆ. ಭಗವಂತ ಪ್ರಸಾದ ಕೊಡು ಎಂದು ನನ್ನ ಜೊತೆಗಿದ್ದವರು ಕೇಳಿದ್ದರು. ಬಹುಶಃ ರಂಗನಾಥನಿಗೂ ನಾನು ಸ್ಪರ್ಧಿಸುವುದಿಲ್ಲ ಎಂಬ ಅನುಮಾನವಿದ್ದಿರಬೇಕು. ನಾನು ತಕ್ಷಣವೇ ಇಲ್ಲ ರಂಗನಾಥ ನಾನು ಸ್ಪರ್ಧಿಸುವುದು ಖಚಿತ ಎಂದ ತಕ್ಷಣವೇ ಪ್ರಸಾದ ಕೊಟ್ಟಿತು. ನಾನು ನೆಮ್ಮದಿಯ ಉಸಿರು ಬಿಟ್ಟೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಗನ್ನಿ ಶಂಕರ್, ಬಾಲು, ಶ್ರೀಕಾಂತ್, ಗಂಗಾಧರ್, ಗುರುಶೇಥ್, ರವಿ ಎಂ, ಜಾಧವ್, ಮೋಹನ್, ತೇಜ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















