ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ವಿವಾಹಿತ ಮಹಿಳೆಯೊಬ್ಬರು(ಹೆಸರು ಪ್ರಕಟಿಸುತ್ತಿಲ್ಲ) ನೇಣು ಬಿಗಿದುಕೊಂಡು ಆತ್ಮಹತ್ಯೆ #suicide ಮಾಡಿಕೊಂಡಿರುವ ಘಟನೆ ಗಾಡಿಕೊಪ್ಪದಲ್ಲಿ ನಡೆದಿದೆ.
31 ವರ್ಷದ ಮಹಿಳೆ ಐದು ವರ್ಷದ ಹಿಂದೆ ವಿವಾಹವಾಗಿದ್ದು, ಈಕೆಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಘಟನೆ ಕುರಿತಂತೆ ಮಹಿಳೆಯ ಪತಿ, ಅತ್ತೆ, ಮಾವನ ವಿರುದ್ಧ ಎಫ್’ಐಆರ್ ದಾಖಲಾಗಿದೆ.
ಏನಿದು ಘಟನೆ?
ಮಹಿಳೆಗೆ ಮದುವೆಯಾಗಿ ಐದು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಇದೂ ವಿಚಾರದೊಂದಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಮಹಿಳೆಯು ತನಗಾಗುತ್ತಿರುವ ತೊಂದರೆಯನ್ನು ತನ್ನ ತವರು ಮನೆಯವರ ಬಳಿ ಹೇಳಿಕೊಂಡಿದ್ದಾಳೆ. ಸಾಯುವುದಕ್ಕೂ ಕೆಲಹೊತ್ತಿಗೂ ಮೊದಲೇ ಆಡಿದ ಮಾತುಗಳನ್ನ ಫೋನ್ ಕರೆಯಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ತವರು ಮನೆಯವರು ವಿಚಾರಿಸಲು ಮಹಿಳೆಯ ಗಂಡನ ಮನೆಗೆ ಹೋದಾಗ ಆಕೆ ಬಾಗಿಲು ಹಾಕಿಕೊಂಡು ರೂಮಿನಲ್ಲಿರುವುದು ಗೊತ್ತಾಗಿದೆ.
ಬಾಗಿಲು ತಟ್ಟಿದರೂ ತೆರೆಯದ ಹಿನ್ನೆಲೆಯಲ್ಲಿ ರೂಮಿನ ಡೋರ್ ಒಡೆದು ಒಳಗೆ ನೋಡಿದರೆ ಮಹಿಳೆಯು ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ.
ತುಂಗಾನಗರ ಪೊಲೀಸರಿಗೆ ದೂರು ನೀಡಿದ್ದು ಎಫ್’ಐಆರ್ ದಾಖಲಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಪತಿಯನ್ನು ಪೊಲೀಸರುವ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















