ಕಲ್ಪ ಮೀಡಿಯಾ ಹೌಸ್ | ಕಾರವಾರ |
ನರೇಂದ್ರ ಮೋದಿಯವರು #NarendraModi ಮತ್ತೆ ಪ್ರಧಾನಿಯಾಗಬೇಕು ಎಂಬ ಹೆಬ್ಬಯಕೆಯಿಂದ ಅಭಿಮಾನಿಯೊಬ್ಬ ತನ್ನ ಬೆರಳನ್ನೇ ಕತ್ತರಿಸಿ, ಕಾಳಿ ಮಾತೆಗೆ ರಕ್ತ ಅರ್ಪಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾರವಾರದ #Karwar ಸೋನಾರವಾಡದಲ್ಲಿ ಘಟನೆ ನಡೆದಿದ್ದು, ಅರುಣ್ ವರ್ಣೇಕರ್ ಎಂಬ ವ್ಯಕ್ತಿ ಮೋದಿಯವರು ಮತ್ತೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ತನ್ನ ಎಡಗೈ ಹೆಬ್ಬೆರಳನ್ನು ಕತ್ತರಿಸಿ, ಕಾಳಿ ಮಾತೆಗೆ ರಕ್ತ ಅರ್ಪಿಸಿದ್ದಾರೆ.

ಬೆರಳು ಕತ್ತರಿಸಿಕೊಂಡು ಅರುಣ್, ಮೋದಿ ಮತ್ತೆ ಪ್ರಧಾನಿಯಾಗಬೇಕು’ ಎಂದು ಬೆರಳು ತುಂಡುಮಾಡಿಕೊಂಡು ಅದರಿಂದ ಸುರಿದ ರಕ್ತದಲ್ಲಿ, ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ ಎಂದು ಬರೆದಿದ್ದಾರೆ.

ಮೋದಿ ಮೊದಲ ಬಾರಿ ಚುನಾವಣೆಗೆ ನಿಂತಾಗ ಕೂಡ ಇದೇ ಅರುಣ್ ರಕ್ತದಲ್ಲಿ ಕಾಳಿಗೆ ಹರಕೆ ಇಟ್ಟಿದ್ದರು. ಈ ಹಿಂದೆಯೂ ಬೆರಳು ಕೊಯ್ದುಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ನೀಡಿದ್ದರು. ಇದು ಕೊನೆಯಬಾರಿ ಆದ್ದರಿಂದ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ತುಂಡರಿಸಿ ಕಾಳಿಗೆ ಅರ್ಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post