ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಮಾಜಿ ಸಚಿವ ಶ್ರೀರಾಮುಲು #Shriramulu ಅವರು ಒಟ್ಟು 45.88 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್’ನಲ್ಲಿ ಅವರು ತಮ್ಮ ಆಸ್ತಿ ವಿವರ ಉಲ್ಲೇಖಿಸಿದ್ದು, ಶ್ರೀರಾಮುಲು ಅವರು, ಒಟ್ಟು 45 ಕೋಟಿ 88 ಲಕ್ಷದ 2 ಸಾವಿರದ 320 ರೂ. ಆಸ್ತಿ ಹೊಂದಿದ್ದಾರೆ.

Also read: ನಾನು ಬಿಜೆಪಿಯಿಂದ ಸ್ಪರ್ಧಿಸಿಲ್ಲ, ಗುರುತು ಕಮಲವಲ್ಲ, ನನ್ನ ಚಿನ್ಹೆ ಏ.22ರಂದು ತಿಳಿಯಲಿದೆ: ಈಶ್ವರಪ್ಪ ಸ್ಪಷ್ಟನೆ
ಶ್ರೀರಾಮುಲು ಅವರ ಪತ್ನಿ ಒಟ್ಟು 22.57 ಕೋಟಿ ರೂ. ಒಟ್ಟು ಮೌಲ್ಯದ ಆಸ್ತಿ, 2.50 ಲಕ್ಷ ರೂ. ನಗದು, 2.28 ಕೋಟಿ ರೂ. ಚರಾಸ್ತಿ, 20.29 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು, ಇವರ ಬಳಿ ಯಾವುದೇ ವಾಹನವಿಲ್ಲ. 2.33 ಕೆಜಿ ಚಿನ್ನ ಹೊಂದಿದ್ದು, ಬೆಳ್ಳಿಯಿಲ್ಲ. ಅಲ್ಲದೇ ಇವರಿಗೆ ಯಾವುದೇ ಸಾಲವೂ ಇಲ್ಲ ಹಾಗೂ ವಾಹನವನ್ನೂ ಸಹ ಹೊಂದಿಲ್ಲ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post